ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹಾಗೂ ನಟಿ ಪರಿಣಿತಿ ಚೋಪ್ರಾ ಈಗಷ್ಟೇ ಮದುವೆಯಾಗಿದ್ದಾರೆ.
ಈಗಷ್ಟೇ ಹಸೆಮಣೆ ಏರಿ ಜಾಲಿ ಮೂಡ್‌ನಲ್ಲಿರೋ ದಂಪತಿಗೆ ಶಾಕ್ ಆಗಿದ್ದು, ದೆಹಲಿ ಕೋರ್ಟ್ ಮನೆ ಖಾಲಿ ಮಾಡುವಂತೆ ಆದೇಶ ನೀಡಿದೆ. ರಾಘವ್‌ಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಕೂಡಲೇ ಖಾಲಿ ಮಾಡಬೇಕು ಎಂದಿದೆ.
ಕಳೆದ ವರ್ಷ ಜುಲೈನಲ್ಲಿ ಟೈಪ್ 6ಬಂಗಲೆಯನ್ನು ರಾಘವ್‌ಗೆ ನೀಡಲಾಗಿತ್ತು. ಆದರೆ ರಾಘವ್ ರಾಜ್ಯಾಧ್ಯಕ್ಷರ ಬಳಿ ಟೈಪ್ 7 ಬಂಗಲೆಗೆ ಬೇಡಿಕೆ ಇಟ್ಟಿದ್ದರು. ಟೈಪ್ 7 ಬಂಗಲೆಯನ್ನು ಮಾಜಿ ಸಚಿವರು, ಮಾಜಿ ಸಿಎಂ ಅಥವಾ ಗವರ್ನರ್‌ಗಳಿಗೆ ನೀಡಲಾಗುತ್ತದೆ. ಆದರೆ ಸಂಸದರಿಗೆ ಟೈಪ್ 7 ಮನೆ ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಇದೀಗ ಟೈಪ್ ೭ ಮನೆಯನ್ನು ಖಾಲಿ ಮಾಡಲು ಸೂಚನೆ ನೀಡಲಾಗಿದೆ.