ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೆಸ್ತೇನ್‌ನ ಗಾಝಾ ಪಟ್ಟಿ ಕಡೆಯಿಂದ ಭೀಕರ ರಾಕೆಟ್ ದಾಳಿಯಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಿಸಿದೆ.
ಶನಿವಾರ ಬೆಳಿಗ್ಗೆಯಿಂದಲೇ ರಾಕೆಟ್ ದಾಳಿ ಆರಂಭವಾಗಿದ್ದು, ಗಾಜಾ ಪಟ್ಟಿಯ ವಿವಿಧ ಕಡೆಗಳಿಂದ ರಾಕೆಟ್ ಉಡಾಯಿಸಲಾಗಿದೆ. ಅದರ ಪರಿಣಾಮ ಇಸ್ರೇಲಿ ಭೂಪ್ರದೇಶದಲ್ಲಿ ಸ್ಪೋಟಗಳು ಸಂಭವಿಸಿವೆ. ಇದರಿಂದಾಗಿ ಇಸ್ರೇಲ್ ಯುದ್ಧದ ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.
ಆಪರೇಷನ್ ಅಲ್-ಅಕ್ಸಾ ಫ್ಲಡ್ ಅನ್ನು ಪ್ರಾರಂಭಿಸಿದ್ದು, ಆರಂಭದಲ್ಲಿ 5,000 ರಾಕೆಟ್‌ಗಳನ್ನು ಹಾರಿಸಲಾಯಿತು ಎಂದು ಹಮಾಸ್ ಸಶಸ್ತ್ರ ವಿಭಾಗ ಹೇಳಿಕೊಂಡಿದೆ.
ಇಸ್ರೇಲ್‌ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಜನರಿಗೆ ಎಚ್ಚರಿಕೆ ನೀಡಿವೆ.
ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ದೇಶದಾದ್ಯಂತ ಬಾಂಬ್‌ಗಳು ಸ್ಫೋಟಗೊಳ್ಳುತ್ತಿವೆ.
ಈ ಭೀಕರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧ ಪರಿಸ್ಥಿತಿಯನ್ನು ಘೋಷಿಸಿದೆ.