RCB ಅಭಿಮಾನಿಗಳಿಗೆ ಬಿಗ್ ಶಾಕ್: ಪ್ಲೇ ಆಫ್​​ಗೂ ಮುನ್ನ ಟೀಮ್ ನಿಂದ ಹೊರಬರಲಿದ್ದಾರಾ ಶೆಫರ್ಡ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವೆ ಇತ್ತೀಚಿಗೆ ನಡೆದ ಪಂದ್ಯದಲ್ಲಿ ವಿಧ್ವಂಸಕ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ರೊಮಾರಿಯೊ ಶೆಫರ್ಡ್ ಐಪಿಎಲ್ 2025ರ ನಿರ್ಣಾಯಕ ಪ್ಲೇಆಫ್‌ಗೂ ಮುನ್ನ RCB ತಂಡವನ್ನು ತೊರೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

CSK ಹಾಗು RCB ನಡುವೆ ನಡೆದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 53 ರನ್‌ಗಳನ್ನು ಕಲೆಹಾಕಿದ ಶೆಫರ್ಡ್, ಆರ್‌ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ವೆಸ್ಟ್ ಇಂಡೀಸ್ ತಂಡದ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಏಕದಿನ ಸರಣಿಗೆ ಆಯ್ಕೆಯಾದ ಕಾರಣ, ಶೆಫರ್ಡ್ ಆರ್‌ಸಿಬಿಯನ್ನು ತೊರೆಯುವ ಸಂಭವವಿದೆ.

ರೊಮಾರಿಯೊ ಶೆಫರ್ಡ್‌ರ ನಿರ್ಗಮನವು ಆರ್‌ಸಿಬಿಯ ತಂಡದ ಸಂಯೋಜನೆಗೆ ಗಂಭೀರ ಪರಿಣಾಮ ಬೀರಬಹುದು. ಶೆಫರ್ಡ್ ಕೇವಲ ವಿಧ್ವಂಸಕ ಬ್ಯಾಟ್ಸ್‌ಮನ್ ಮಾತ್ರವಲ್ಲ, ಒಬ್ಬ ಉಪಯುಕ್ತ ವೇಗದ ಬೌಲರ್ ಕೂಡ ಆಗಿದ್ದಾರೆ. ಅವರ ಬದಲಿಗೆ ತಂಡದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅಥವಾ ಇನ್ನೊಬ್ಬ ಆಲ್‌ರೌಂಡರ್‌ಗೆ ಅವಕಾಶ ಸಿಗಬಹುದಾದರೂ, ಶೆಫರ್ಡ್‌ರಂತಹ ಪರಿಣಾಮಕಾರಿ ಫಿನಿಶರ್‌ನ ಕೊರತೆ ತಂಡಕ್ಕೆ ಕಾಡಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!