Wednesday, February 21, 2024

ಶರದ್‌ ಪವಾರ್‌ಗೆ ಬಿಗ್ ಶಾಕ್: ಅಜಿತ್‌ ಪವಾರ್‌ ಬಣವೇ ನಿಜವಾದ ಎನ್‌ಸಿಪಿ ಎಂದ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಮೈತ್ರಿಯ ನಾಯಕ ಶರದ್‌ ಪವಾರ್‌ಗೆ ಬಿಗ್ ಶಾಕ್ ಎದುರಾಗಿದ್ದು, ಶರದ್‌ ಪವಾರ್‌ ತಾವೇ ಕಟ್ಟಿ ಬೆಳೆಸಿದ ಎನ್‌ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್‌ಸಿಪಿ ಹೆಸರು ಅಜಿತ್‌ ಪವಾರ್‌ ಪಾಲಾಗಿದೆ.

ಅಜಿತ್‌ ಪವಾರ್‌ ಅವರಿಗೆ ಎನ್‌ಸಿಪಿ ಪಕ್ಷದ ಚಿಹ್ನೆ ಹಾಗೂ ಹೆಸರನ್ನು ಚುನಾವಣಾ ಆಯೋಗ ನೀಡಿದೆ.

‘6 ತಿಂಗಳಿಗಿಂತ ಹೆಚ್ಚು ಕಾಲ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವಿಚಾರದ ವಿವಾದವನ್ನು ಚುನಾವಣಾ ಆಯೋಗ ಇತ್ಯರ್ಥ ಮಾಡಿದೆ’ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದರೊಂದಿಗೆ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ಪರಿಗಣಿಸಿದಂತಾಗಿದೆ.

ಎಲ್ಲ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎನ್‌ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಹಕ್ಕಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಹೊಸ ಪಕ್ಷ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಆಯೋಗ ಶರದ್ ಪವಾರ್ ಅವರನ್ನು ಕೇಳಿದೆ. ಈ ಹೆಸರುಗಳನ್ನು ಬುಧವಾರ ಸಂಜೆ 4 ಗಂಟೆಯೊಳಗೆ ನೀಡಬೇಕು ಎಂದು ತಿಳಿಸಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!