ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಶೀಘ್ರದಲ್ಲಿ ನಂದಿನಿ ಹಾಲಿನ ದರ ಏರಿಕೆ ಮಾಡಲು ಹೊರಟಿದ್ದು, ಅಧಿವೇಶನದ ಬಳಿಕ ನಂದಿನಿ ಹಾಲಿನ ದರ ಏರಿಕೆ ಆಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಾಲಿನಗರ ಏರಿಕೆ ಆಗಲಿದೆ. ಹೆಚ್ಚಳ ಮಾಡಿರುವ ಹಾಲಿನ ದರದ ಹಣ ರೈತರಿಗೆ ಹೋಗಲಿದೆ. ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಥವಾ ಅಧಿವೇಶನ ಮುಗಿದ ಬಳಿಕ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಹೇಳಿಕೆ ನೀಡಿದರು.
ಹಾಲಿನ ದರ 5 ರೂ. ಏರಿಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಪರಿಷ್ಕೃತ ಹಾಲಿನ ದರ ಹೆಚ್ಚಳ ಮಾಡುವಾಗಲೇ ಹೆಚ್ಚುವರಿ ಹಾಲಿನ ದರ ಕಡಿತ ಜೊತೆಗೆ 50 ML ಹಾಲು ಕಡಿತ ಮಾಡಲಾಗುತ್ತದೆ. ಹೆಚ್ಚುವರಿ ಹಾಲಿನ ದರ 2 ರೂ. ಇದ್ದು, ಅದು ಕಡಿತವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.