ಕಿರುತೆರೆ ಫೇಮಸ್‌ ಕಪಲ್‌ಗೆ ಬಿಗ್‌ ಶಾಕ್‌, ಕಾರು ಒಡೆದು 10 ಲಕ್ಷ ರೂ. ಮೌಲ್ಯದ ವಸ್ತು ಎಸ್ಕೇಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಂದಿ ಕಿರುತೆರೆಯಲ್ಲಿ ಯೇ ಹೇ ಮೊಹಬ್ಬತೇ ಸೀರಿಯಲ್‌ ಮೂಲಕ ಮನೆ ಮಾತಾಗಿರುವ ದಿವ್ಯಾಂಕಾ ತ್ರಿಪಾಠಿ ಹಾಗೂ ಪತಿ ವಿವೇಕ್‌ ದಹಿಯಾಗೆ ವಿದೇಶದಲ್ಲಿ ರಾಬರಿ ಆಗಿದೆ.

ವಿವೇಕ್ ಮತ್ತು ದಿವ್ಯಾಂಕಾ ಇಬ್ಬರೂ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಯುರೋಪ್​ಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಅವರು ಕಳ್ಳರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಟಲಿಯಲ್ಲಿ ಪ್ರಯಾಣಿಸುತ್ತಿದ್ದ ವಿವೇಕ್-ದಿವ್ಯಾಂಕಾ ಅವರ ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೀಗಾಗಿ ಇಬ್ಬರೂ ವಿದೇಶದಲ್ಲಿ ಸಂಕಷ್ಟದಲ್ಲಿದ್ದು, ಪೊಲೀಸರೂ ಈ ವಿಚಾರದಲ್ಲಿ ಅಸಹಾಯಕತೆ ತೋರಿದ್ದಾರೆ ಎಂದು ದಿವ್ಯಾಂಕಾ-ವಿವೇಕ್ ಆರೋಪಿಸಿದ್ದಾರೆ.

ಪ್ರಸ್ತುತ ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ವಿದೇಶ ಪ್ರವಾಸದಲ್ಲಿರುವ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಪ್ರವಾಸದ ಅದ್ಭುತ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಲ್ಲಿ ಅವರಿಗೆ ಕೆಟ್ಟ ಅನುಭವವೂ ಆಯಿತು. ಅಲ್ಲಿ ದಂಪತಿಯನ್ನು ಕಳ್ಳರು ದರೋಡೆ ಮಾಡಿದ್ದಾರೆ. ದಂಪತಿಯ ಶಾಪ್ ಮಾಡಿದ ವಸ್ತುಗಳು, ವ್ಯಾಲೆಟ್‌ಗಳು, ಪಾಸ್‌ಪೋರ್ಟ್‌ಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!