ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ಅಶ್ಲೀಲ ವಿಡಿಯೋ ಹಾಗೂ ಕಾರ್ಯಕ್ರಮಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿಸಿದೆ.
ಕೇಂದ್ರ ಸರ್ಕಾರ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಬಿಗ್ ಶಾಕ್ ನೀಡಿದೆ. ಈಗಾಗಲೇ ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಅಶ್ಲೀಲ ಹಾಗೂ ಪೋರ್ನೋಗ್ರಾಫಿಕ್ ದೃಶ್ಯಗಳ ಪ್ರಸಾರವನ್ನು ಮುಂದುವರಿಸಿರುವ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ವನ್ನು ಸರ್ಕಾರ ನಿಷೇಧಿಸಿದೆ.
ನಿರ್ಬಂಧಿಸಲಾದ ಡಿಜಿಟಲ್ ಸೇವೆಗಳೆಂದರೆ MoodXVIP, Koyal Playpro, Digi Movieplex, Feel ಮತ್ತು Jugnu.ಅಧಿಕಾರಿಗಳ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ ಒಟಿಟಿ ವೇದಿಕೆಗಳನ್ನು ನಿರ್ಬಂಧಿಸಿದೆ.
ವರದಿಯ ಪ್ರಕಾರ ಈ ಒಟಿಟಿಯಲ್ಲಿ ಲೈಂಗಿಕ ಪ್ರಚೋದನೆ ರೀತಿ ಕಟೆಂಟ್ ಸ್ಟ್ರೀಮಿಂಗ್ ಆಗಿದೆ. ಇದು ಐಟಿ ಕಾಯ್ದೆಯ ಸೆಕ್ಷನ್ 67A ಅನ್ನು ಉಲ್ಲಂಘಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ವೀಡಿಯೊಗಳು ನಗ್ನತೆಯನ್ನು ಒಳಗೊಂಡಿರುತ್ತವೆ. ಇದರಿಂದಾಗಿ ಅವು ಅಶ್ಲೀಲ ಸ್ವರೂಪದಲ್ಲಿರುತ್ತವೆ.



