October 10, 2026
Saturday, October 10, 2026
spot_img

RR vs RCB | ಯಾಕ್ರೋ ಹಿಂಗೇ…! 2 ಮ್ಯಾಚ್ ಗೆದ್ದು 3ನೇ ಮ್ಯಾಚ್ ದೇವ್ರಿಗೆ ಬಿಟ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಸೀಸನ್‌ನ ಮೊದಲ ಸೋಲು ಎದುರಾಗಿದೆ. ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ಸತತ ನಾಲ್ಕನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೂ ನಾಯಕ ರಜತ್ ಪಾಟಿದಾರ್ ಜವಾಬ್ದಾರಿಯುತವಾಗಿ 40 ಎಸೆತಗಳಲ್ಲಿ 63 ರನ್‌ಗಳ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ 32 ರನ್‌ಗಳ ಕೊಡುಗೆ ನೀಡಿದರೆ, ಕೊನೆಯಲ್ಲಿ ವೆಂಕಟೇಶ್ ಅಯ್ಯರ್ ವೇಗದ 29 ರನ್‌ಗಳಿಂದ ತಂಡವನ್ನು 20 ಓವರ್‌ಗಳಲ್ಲಿ 201/8ಕ್ಕೆ ಕೊಂಡೊಯ್ದರು.

ಇದನ್ನೂ ಓದಿ:

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಆಟವಾಡಿ ಕೇವಲ 26 ಎಸೆತಗಳಲ್ಲಿ 78 ರನ್ ಸಿಡಿಸಿದರು. ಅವರ ಜೊತೆಗೆ ಧೃವ್ ಜುರೆಲ್ ಅಜೇಯ 81 ರನ್‌ಗಳ ಮ್ಯಾಚ್‌ವಿನ್ನಿಂಗ್ ಇನ್ನಿಂಗ್ಸ್ ಆಡಿ ಆರ್‌ಸಿಬಿ ಕೈಯಿಂದ ಪಂದ್ಯವನ್ನು ಸಂಪೂರ್ಣ ಕಿತ್ತುಕೊಂಡರು. ಇವರಿಬ್ಬರ ಜೊತೆಯಾಟವೇ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು.

18 ಓವರ್‌ಗಳಲ್ಲೇ ಗುರಿ ತಲುಪಿದ ರಾಜಸ್ಥಾನ್, ಈ ಸೀಸನ್‌ನಲ್ಲಿ ತನ್ನ ಅದ್ಭುತ ಫಾರ್ಮ್ ಮುಂದುವರಿಸಿದರೆ, ಆರ್‌ಸಿಬಿಗೆ ಇದು ಮೊದಲ ಎಚ್ಚರಿಕೆಯ ಸೋಲಾಗಿಯೇ ಉಳಿಯಿತು.

Must Read