ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಖರೀದಿಸುವ ಕೋಟ್ಯಂತರ ಜನರಿಗೆ ದೊಡ್ಡ ಶಾಕ್ ಸಿಕ್ಕಿದೆ. ಇಂದಿನಿಂದ ಅಂದರೆ ಅಕ್ಟೋಬರ್ 1 ರಿಂದ 19 ಕೆ.ಜಿ. ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿಗೂ ಅಧಿಕ ಏರಿಕೆಯಾಗಿದೆ. ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ದರ ಹೀಗಿದೆ
- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 209ರೂಪಾಯಿಗೆ ಬೆಲೆ ಏರಿಕೆಯಾಗಿದ್ದು, ಇಲ್ಲಿ ಸಿಲಿಂಡರ್ ಬೆಲೆ 1731.50ಕ್ಕೆ ತಲುಪಿದೆ.
- ಕೋಲ್ಕತ್ತಾದಲ್ಲಿ ಈ ರೂ.203.5 ಏರಿಕೆ ಕಂಡುಬಂದಿದ್ದು, ಬೆಲೆ ರೂ.1839.50 ತಲುಪಿದೆ.
- ಮುಂಬೈನಲ್ಲಿ 202ರೂ. ಏರಿಕೆಯಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ರೂ.1684ಕ್ಕೆ ತಲುಪಿದೆ.
- ಚೆನ್ನೈನಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ರೂ.203 ಏರಿಕೆಯಾಗಿ ರೂ.1898ಕ್ಕೆ ತಲುಪಿದೆ.
- ಬೆಂಗಳೂರಿನಲ್ಲಿ 203ರೂಪಾಯಿ ಏರಿಕೆಯಾಗಿದ್ದು, ಒಟ್ಟು 1813ರೂಪಾಯಿ ತಲುಪಿದೆ.
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಮತ್ತೊಂದೆಡೆ, ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದಿಗೂ ದೇಶದ ಮೆಟ್ರೋಪಾಲಿಟನ್ ನಗರಗಳ ಜನರು ಸೆಪ್ಟೆಂಬರ್ ತಿಂಗಳಿನಷ್ಟೇ ಹಣ ಪಾವತಿಸಬೇಕಾಗಿದೆ. ವಾಸ್ತವವಾಗಿ, ಆಗಸ್ಟ್ 30 ರಂದು ಕೇಂದ್ರ ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂ. ಕಡಿಮೆ ಮಾಡಿತ್ತು. ಅಂದಿನಿಂದ ಯಾವುದೇ ಬದಲಾವಣೆ ಇಲ್ಲ.
- ದೆಹಲಿ 903ರೂ
- ಕೋಲ್ಕತ್ತಾ 929ರೂ
- ಮುಂಬೈ 902.50ರೂ
- ಚೆನ್ನೈ 918.50 ರೂ
- ಬೆಂಗಳೂರು 905.50ರೂ