June 20, 2026
Saturday, June 20, 2026
spot_img

IPLನಲ್ಲಿ ಬಿಗ್ ಸ್ವಾಪ್: ಪಂತ್-ಕುಲ್ದೀಪ್ ತಂಡ ಬದಲಾವಣೆ ಆಗುತ್ತಾ? ಫ್ರಾಂಚೈಸಿಗಳಲ್ಲಿ ಏನ್ ನಡೀತಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2027 ಆರಂಭಕ್ಕೂ ಮುನ್ನವೇ ಆಟಗಾರರ ವರ್ಗಾವಣೆ ಕುರಿತ ಚರ್ಚೆಗಳು ಜೋರಾಗಿವೆ. ಪ್ರಮುಖವಾಗಿ ರಿಷಭ್ ಪಂತ್ ಹಾಗೂ ಕುಲ್ದೀಪ್ ಯಾದವ್ ತಂಡ ಬದಲಾಯಿಸುವ ಸಾಧ್ಯತೆಗಳ ಬಗ್ಗೆ ವರದಿಗಳು ಹರಿದಾಡುತ್ತಿವೆ.

ಪಂತ್‌ಗೆ ಡೆಲ್ಲಿ ವಾಪಸ್?

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಸೇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ದುಬಾರಿ ಮೊತ್ತಕ್ಕೆ ಖರೀದಿಯಾಗಿದ್ದರೂ ಪಂತ್ ನಿರೀಕ್ಷಿತ ಪ್ರದರ್ಶನ ನೀಡದಿರುವುದು ಈ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:

ಕುಲ್ದೀಪ್ ಲಕ್ನೋಗೆ?

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಲಕ್ನೋ ತಂಡಕ್ಕೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಆವೃತ್ತಿಯಲ್ಲಿ ಅವರ ಪ್ರದರ್ಶನ ಸಾಧಾರಣ ಮಟ್ಟದಲ್ಲಿದ್ದ ಕಾರಣ ಫ್ರಾಂಚೈಸಿ ಹೊಸ ಆಯ್ಕೆಗಳತ್ತ ಗಮನ ಹರಿಸಿದೆ ಎಂಬ ಮಾಹಿತಿ ಇದೆ.

ರಾಹುಲ್‌ಗೆ ನಾಯಕತ್ವ?

ಇದರ ನಡುವೆ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ನೀಡುವ ಸಾಧ್ಯತೆಗಳೂ ಕೇಳಿಬಂದಿವೆ. ನಾಯಕನಾಗಿ ಈಗಾಗಲೇ ಅನುಭವ ಹೊಂದಿರುವ ರಾಹುಲ್ ಮೇಲೆ ಫ್ರಾಂಚೈಸಿ ವಿಶ್ವಾಸ ವ್ಯಕ್ತಪಡಿಸಬಹುದು ಎಂದು ವರದಿಗಳು ಸೂಚಿಸಿವೆ.

ಆದರೆ ಈ ಎಲ್ಲ ಬೆಳವಣಿಗೆಗಳ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !