September 16, 2026
Wednesday, September 16, 2026
spot_img

ಬಿಗ್ ಟ್ವಿಸ್ಟ್: ಇರಾನ್ ವಿರುದ್ಧ ಯುದ್ಧಕ್ಕಿಳಿದ ಯುಎಇ: ಟೆಹ್ರಾನ್‌ನಲ್ಲಿ ರೆಡ್ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಆಯಕಟ್ಟಿನ ಸ್ಥಳಗಳ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿದೆ. ಬುಶೆಹರ್ ಪರಮಾಣು ಸಂಕೀರ್ಣ, ಚಬಹಾರ್ ಬಂದರು ಮತ್ತು ಇರಾನಿಶಾಹರ್ ವಿಮಾನ ನಿಲ್ದಾಣದ ಬಳಿ ಭೀಕರ ಸ್ಫೋಟಗಳು ಸಂಭವಿಸಿದ್ದು, ಇರಾನ್‌ನ ಸಾರಿಗೆ ಮೂಲಸೌಕರ್ಯಗಳಾದ ಪ್ರಮುಖ ರಸ್ತೆ ಮತ್ತು ರೈಲ್ವೆ ಜಾಲಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.

ಇರಾನ್ ವಿರುದ್ಧ ಯುದ್ಧಕ್ಕಿಳಿದ ಯುಎಇ

ಈ ಸಂಘರ್ಷದಲ್ಲಿ ಸದ್ಯ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೊದಲ ಬಾರಿಗೆ ನೇರವಾಗಿ ಇರಾನ್ ವಿರುದ್ಧ ಸಮರ ಸಾರಿದೆ. ಅಮೆರಿಕ ನಿರ್ಮಿತ ಅತ್ಯಾಧುನಿಕ ಡ್ರೋನ್‌ಗಳ ಮೂಲಕ ಯುಎಇ ಪಡೆಗಳು ಇರಾನ್‌ನ ಆಯಕಟ್ಟಿನ ಬಂದರ್ ಅಬ್ಬಾಸ್ ಬಂದರನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡಿರುವ ಇರಾನ್ ಸೇನೆ, ಯುಎಇಯ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಪ್ರತಿಪಾದಿಸಿದೆ.

ಕೆಂಪು ಸಮುದ್ರ ಬಂದ್: ಜಾಗತಿಕ ತೈಲ ಆತಂಕ

ಮತ್ತೊಂದೆಡೆ, ಅಮೆರಿಕದ ಸರಣಿ ದಾಳಿಗಳಿಂದ ಆಕ್ರೋಶಗೊಂಡಿರುವ ಇರಾನ್, ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಸ್ ಜಲಸಂಧಿ ಮತ್ತು ಕೆಂಪು ಸಮುದ್ರದ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡುವ ಎಚ್ಚರಿಕೆ ನೀಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆಗೆ ಭಾರಿ ಅಡ್ಡಿಯಾಗುವ ಆತಂಕ ಎದುರಾಗಿದೆ.

ಅಮೆರಿಕ ವಿರುದ್ಧ ಇರಾನ್ ಆಕ್ರೋಶ

ಈ ಭೀಕರ ದಾಳಿಗಳ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಅಮೆರಿಕ ಎಸಗುತ್ತಿರುವ ಘೋರ ಯುದ್ಧಾಪರಾಧ ಎಂದು ಆಕ್ಷೇಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !