ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಚ್ಚ ಸುದೀಪ ಹಾಗೂ ಅನೂಪ್ ಬಂಡಾರಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಬಿಲ್ಲ ರಂಗ ಬಾಷ ಸಿನಿಮಾ ಫಸ್ಟ್ ಲುಕ್ ರಿವೀಲ್ ಆಗಿದೆ.
ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಿರಲಿಲ್ಲ. ಆದರೆ ಇದೀಗ ಚಿತ್ರತಂಡ ಗುಡ್‌ನ್ಯೂಸ್ ಕೊಟ್ಟಿದ್ದು ಏ.18ರಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದೆ.
2209 AD – #BRBFirstBlood ⭐️🥂
The journey begins today.To us, this mammoth dream and vision of our team,going on floor is an unparalled excitement.@brbmovie @anupsbhandari @Niran_Reddy @Chaitanyaniran @Primeshowtweets pic.twitter.com/O4UjrjQzMP
— Kichcha Sudeepa (@KicchaSudeep) April 16, 2025
ಕಿಚ್ಚ ಸುದೀಪ್ ನಿರ್ದೇಶಕ ಅನುಪ್ ಭಂಡಾರಿ ಜೊತೆ ಸೇರಿ ‘ಬಿಲ್ಲ ರಂಗ ಬಾಷ’ ಸಿನಿಮಾ ಮಾಡುತ್ತೇನೆ ಎಂದು ಈ ಮೊದಲೇ ಘೋಷಿಸಿದ್ದರು. ಬಜೆಟ್ನ ಕಾರಣಕ್ಕೆ ‘ವಿಕ್ರಾಂತ್ ರೋಣ’ ಚಿತ್ರವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈಗ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಅವರು ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.
ಸುದೀಪ್ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ. ಹಿಮ ಬೀಳುವ ಪ್ರದೇಶದಲ್ಲಿ ಸುದೀಪ್ ನಿಂತಿದ್ದಾರೆ. ಅವರ ಮೈಮೇಲೆ ನೀರಿನ ಹನಿ ಇದೆ. ಅವರು ಕನ್ನಡಕದ ರೀತಿಯ ವಸ್ತುವನ್ನು ಹಣೆಮೇಲೆ ಇಟ್ಟುಕೊಂಡಿದ್ದಾರೆ. ಕನ್ನಡಕದ ಮೇಲಿನ ಪ್ರತಿಬಿಂಬದಲ್ಲಿ ಕಟ್ಟವೊಂದಕ್ಕೆ ಬೆಂಕಿ ಬಿದ್ದಿರುವುದು ಕಂಡಿದೆ. ಸುದೀಪ್ ಹಿಂಭಾಗದಲ್ಲಿ ಕಟ್ಟವೊಂದು ಇದೆ. ಈ ಪೋಸ್ಟರ್ ಮೂಲಕ ಏನನ್ನು ತಂಡ ಹೇಳಲು ಹೊರಟಿದೆ ಎಂಬ ಕುತೂಹಲ ಮೂಡಿದೆ.