ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಲಿಬಾನ್ ಜೊತೆ ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟಾಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ. ಆದರೆ, ಅಫ್ಘಾನಿಸ್ತಾನದಿಂದ ಅಮೆರಿಕನ್ನರು ಹೊರಟುಹೋದಾಗ, ಡಬಲ್ ಗೇಮ್ ಆಟ ಮುಂದುವರಿಸಲು ಪಾಕಿಸ್ತಾನಗೆ ಸಾಧ್ಯವಾಗುತ್ತಿಲ್ಲ, ಅಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆ ಸೃಷ್ಟಿಸಿದ್ದು ಪಾಕಿಸ್ತಾನ. ಪಾಕಿಸ್ತಾನವೇ ಉತ್ತೇಜಿಸಿದ ಭಯೋತ್ಪಾದನಾ ವ್ಯವಸ್ಥೆ ಈಗ ಆ ದೇಶವನ್ನೇ ಕಚ್ಚಲು ಹೊರಟಿದೆ ಎಂದು ಸಚಿವರು ಟೀಕಿಸಿದ್ದಾರೆ.