ELECTION RESULT| ಕಾಂಗ್ರೆಸ್‌ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಭರ್ಜರಿ ಗೆಲವು

ಹೊಸದಿಗಂತ ವರದಿ ಧಾರವಾಡ:

ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಭರ್ಜರಿ ಗೆಲವು ಸಾಧಿಸಿದ್ದಾರೆ.

17 ಸುತ್ತಿನ ಮತ ಎಣಿಕೆಯಲ್ಲಿ ಪ್ರತಿ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ ವಿನಯ್ ಅಂತಿಮ 88,660 ಮತ ಪಡೆದು, 18,114 ಮತಗಳ ಅಂತರದ ಗೆಲುವಿನ ನಗೆ ಬೀರಿದರು.

ಯೋಗೇಶಗೌಡರ ಕೊಲೆ ಪ್ರಕರಣದ ಆರೋಪದಲ್ಲಿ ಕ್ಷೇತ್ರದಿಂದ ಹೊರಗಿದ್ದರೂ ವಿನಯ್ ಅವರನ್ನು ಮತದಾರ ಪ್ರಭು ಕೈಹಿಡಿದಿದ್ದು ಬಿಜೆಪಿಗೆ ಅಚ್ಚರಿ ತಂದಿದೆ ಎಂದರೆ ತಪ್ಪಿಲ್ಲ.

ಅಲ್ಲದೇ, 70,546 ಮತ ಪಡೆದ ಪ್ರತಿಸ್ಪರ್ಧಿ ಬಿಜೆಪಿಯ ಅಮೃತ ದೇಸಾಯಿ ಸೋಲಿನ ಕಹಿ ಅನುಭವಿಸಿದರು. ಇದೇ ವೇಳೆ ಕೈ ಕಾರ್ಯಕರ್ತರು ಸಂಭ್ರಮ ಆಚರಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!