ಮೂಡ್‌ ಇಲ್ಲಾಂದ್ರೆ 3 ದಿನ ಸ್ನಾನನೇ ಮಾಡಲ್ವಂತೆ ಸೋನು ಶ್ರೀನಿವಾಸ್‌ ಗೌಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮೊದಲ ವಾರ ಪಂಚಾಯ್ತಿ ನಡೆಸಿದ್ದಾರೆ. ಈ ವೇಳೆ ಹಲವು ವಿಷಯಗಳ ಚರ್ಚೆ ನಡೆದಿದೆ. ಈ ಸಂಚಿಕೆ ಬಹಳಷ್ಟು ತಮಾಷೆಯ ಪ್ರಸಂಗಗಳಿಗೆ ಸಾಕ್ಷಿಯಾಯಿತು. ಈ ರಿಯಾಲಿಟಿ ಶೋನಲ್ಲಿ ಸೋನು ಶ್ರೀನಿವಾಸ್ ಗೌಡ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ತಮ್ಮ ಮುಕ್ತ ಮಾತುಗಳಿಂದ ಗಮನ ಸೆಳೆಯುತ್ತಿದ್ದಾರೆ. ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಆ ಮೂಲಕ ಬಿಗ್ ಬಾಸ್ ಕನ್ನಡ ಒಟಿಟಿ ಸೋನು ಗೌಡ ಶೋನಲ್ಲಿ ಚರ್ಚೆಯಾಗುತ್ತಿದೆ. ಆಶ್ಚರ್ಯವೆಂದರೆ, ‘ಸೋನು ತನಗೆ ಮೂಡ್ ಇರದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ’ ಎಂದರು. ಇದನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.
‘ಸೋನು ಗೌಡ ಸ್ನಾನ ಮಾಡುವುದಿಲ್ಲ’ ಎಂದು ಸನ್ಯಾ ಅಯ್ಯರ್ ಆರೋಪಿಸಿದ್ದಾರೆ. ‘ಹೌದು, ನಾನು ಇವತ್ತು ಸ್ನಾನ ಮಾಡಿಲ್ಲ’ ಎಂದು ಸುದೀಪ್ ಬಳಿ ಒಪ್ಪಿಕೊಂಡರು ಸೋನು ಗೌಡ. ‘ಇಲ್ಲಿನ ಅನೇಕರು ಸ್ನಾನದ ಬಗ್ಗೆ ನಾಟಕ ಮಾಡುತ್ತಿರುತ್ತಾರೆ. ಇಲ್ಲಿ ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಕೆಲವೊಮ್ಮೆ ನಂಗೆ ಮನೆಯಲ್ಲಿ ಮೂಡ್ ಇರುವುದಿಲ್ಲ ಹಾಗಾಗಿ ಮೂರು ದಿನಕ್ಕೊಮ್ಮೆ ಸ್ನಾನ ಮಾಡುತ್ತೇನೆ ಎಂದು ಸೋನು ಹೇಳಿದ್ದಾರೆ. ಆಕೆಯ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು.
ಸೋನು ಶ್ರೀನಿವಾಸ್ ಗೌಡ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಈ ವೇದಿಕೆಯಲ್ಲಿ ಅವರಿಗೆ ಅವಕಾಶ ನೀಡಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಮೊದಲ ವಾರದಲ್ಲೇ ಅವರು ಎಲಿಮಿನೇಟ್ ಆಗಬಹುದು ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ವೀಕ್ಷಕರಿಂದ ಉತ್ತಮ ವೋಟ್ ಪಡೆದಿದ್ದರಿಂದ ಸೋನು ಮೊದಲ ವಾರ ಸೇಫ್ ಆಗಿದ್ದಾರೆ. ಈಗ ಸ್ನಾನದ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮ ಪ್ರಾರಂಭವಾಗಿ ಒಂದು ವಾರ ಕಳೆದಿದೆ. ವಾರದ ಪಂಚಾಯತಿಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ‘ಈ ಮನೆಯಲ್ಲಿ ತಮ್ಮ ವಸ್ತುಗಳನ್ನು ಯಾರು ಗಲೀಜಾಗಿ ಇಟ್ಟುಕೊಳ್ಳುತ್ತಾರೆ?’ ಎಂದು ಕೇಳುತ್ತಿದ್ದಂತೆಯೇ ಹಲವರ ಹೆಸರುಗಳು ಹೊರ ಬಂದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!