ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಈ ಎಂಟ್ರಿ ಎಷ್ಟು ಸರಿ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿತ್ತು.
ಇದೀಗ ಪ್ರದೀಪ್ ಈಶ್ವರ್ ಮನೆಯಿಂದ ಹೊರಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಬಿಗ್‌ಬಾಸ್ ಮನೆಗೆ ತೆರಳಿ ಯುವಕರಿಗೆ ಕಿವಿಮಾತು ಹೇಳೋಣ ಎಂದುಕೊಂಡಿದ್ದ ಈಶ್ವರ್ ಲೆಕ್ಕಾಚಾರ ಉಲ್ಟಾ ಆಗಿದೆ.
ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಬೇಕಿರುವ ರಾಜಕಾರಣಿಗಳೆಲ್ಲ ಬಿಗ್‌ಬಾಸ್ ಹೋಗೋಕೆ ಶುರು ಮಾಡಿದ್ರೆ ಜನ ಏನು ಮಾಡಬೇಕು ಎಂದು ಮತದಾರರು ಗರಂ ಆಗಿದ್ದರು. ಈ ಬಗ್ಗೆ ಪ್ರದೀಪ್ ಸ್ಪಷ್ಟನೆ ನೀಡಿದ್ದು, ನಾನು ಅಲ್ಲಿ ಇದ್ದದ್ದೇ ಎರಡು ಮೂರು ಗಂಟೆ ಮಾತ್ರ, ಸ್ಪರ್ಧಿಯಾಗಿ ಹೋಗಿಲ್ಲ. ಕಾರ್ಯಕ್ರಮದ ಆಯೋಜಕರು ಅತಿಥಿಯಾಗಿ ಕರೆದಿದ್ದರು ಹೋಗಿದ್ದೇನೆ, ಈಗ ಬಿಗ್‌ಬಾಸ್ ಮನೆಗೆ ಹೋಗಿದ್ರಲ್ಲಿ ಅಂಥ ದೊಡ್ಡ ತಪ್ಪೇನಿದೆ? ಮಾತನಾಡೋರು ಮಾತಾಡ್ಲಿ ಅದು ಅವರ ಅಭಿಪ್ರಾಯ. ನೂರು ದಿನ ಅಲ್ಲೇ ಇದ್ದಿದ್ರೆ ಮಾತಾಡ್ಬೋದಿತ್ತು. ಒಂದು ದಿನಕ್ಕೆ ಇಷ್ಟೆಲ್ಲಾ ಬೆಳವಣಿಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.