Friday, March 1, 2024

BIG BOSS | ಬಿಗ್‌ಬಾಸ್ ಬಾಗಿಲು ತೆಗೀರಿ ಅಪ್ಪ ಬಂದಿದಾರೆ, ಕಣ್ಣೀರಾದ ಡ್ರೋನ್ ಪ್ರತಾಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್, ಎಲ್ಲ ಕಂಟೆಸ್ಟೆಂಟ್ಸ್ ಈ ವಾರಕ್ಕೆ ಕಾಯುತ್ತಾ ಇದ್ದರು. ಇದೀಗ ಎಲ್ಲರ ಪೋಷಕರು ಒಬ್ಬೊಬ್ಬರಂತೆ ಬಂದು ಹೋಗುತ್ತಿದ್ದಾರೆ.

ಆದರೆ ಇಷ್ಟು ಸಮಯವಾದ್ರೂ ಡ್ರೋನ್ ಪ್ರತಾಪ್ ಪೋಷಕರು ಮಾತ್ರ ಬಂದಿರಲಿಲ್ಲ. ಮೂರು ವರ್ಷದಿಂದ ಪೋಷಕರ ಜೊತೆ ಮಾತನಾಡದ ಡ್ರೋನ್ ಪ್ರತಾಪ್‌ಗೆ ಅಪ್ಪ ಅಮ್ಮ ಬರ‍್ತಾರೋ ಇಲ್ವೋ ಅನ್ನೋದೇ ಡೌಟ್ ಆಗಿತ್ತು.

ಆದರೆ ಬಿಗ್‌ಬಾಸ್ ಡ್ರೋನ್ ಪೋಷಕರನ್ನು ಕರೆಸಿದ್ದಾರೆ. ಊಟ ತಿಂಡಿ ಬಿಟ್ಟು ಪ್ರತಾಪ್ ಹೆತ್ತವರನ್ನು ನೋಡೋಕೆ ಚಡಪಡಿಸಿದ್ದಾರೆ. ಕಡೆಗೂ ದೊಡ್ಮನೆಯ ಮೇನ್ ಡೋರ್‌ನಿಂದ ಪೋಷಕರು ಬಂದೇ ಬಿಟ್ಟಿದ್ದಾರೆ. ಆದರೆ ಮನೆಯ ಬಾಗಿಲನ್ನು ಬಿಗ್ ಬಾಸ್ ಲಾಕ್ ಮಾಡಿದ್ದಾರೆ. ಬಾಗಿಲ ಬಳಿ ನಿಂತು ಅಪ್ಪಾ ಅಮ್ಮಾ ಎಂದು ಡ್ರೋನ್ ಕಣ್ಣೀರಿಟ್ಟಿದ್ದಾರೆ.

ಬಾಗಿಲು ತೆಗೀರಿ ಪ್ಲೀಸ್ ಎಂದು ಅತ್ತಿದ್ದಾರೆ. ಬ್ಯೂಟಿಫುಲ್ ಪ್ರೋಮೊ ಇಲ್ಲಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!