ಬಿಗ್ ಬಾಸ್ ಒಟಿಟಿ | ತಾಯಿ ಕಳೆದುಕೊಂಡೆ, ತಂದೆ ಪ್ರೀತಿ ಗುರೂಜಿ ತುಂಬಿದ್ದಾರೆ: ಭಾವುಕರಾದ ರೂಪೇಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಕನ್ನಡ ಬಿಗ್ ಬಾಸ್ ಒಟಿಟಿ ಶೋ ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ರಂಗೇರುತ್ತಿದೆ.

ಇದೀಗ 16 ಜನವಿದ್ದ ಮನೆಯಲ್ಲಿ ಒಬ್ಬೊಬ್ಬರೇ ಖಾಲಿಯಾಗುತ್ತಿದ್ದಾರೆ. ಮನೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕಷ್ಟ, ಸೋಲಿನ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಇದೀಗ ಬಿಗ್ ಬಾಸ್ ಇದೀಗ ಮತ್ತೊಂದು ಟಾಸ್ಕ್ ನೀಡಿದೆ. ಇಷ್ಟ-ಕಷ್ಟ ಹೆಸರಿನಲ್ಲಿ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿಸ್ಪರ್ಧಿಗಳು ತಮ್ಮ ಇಷ್ಟ ಕಷ್ಟಗಳ ಬಗ್ಗೆ ಹೇಳಿಕೊಳ್ಳಬೇಕು. ಈ ವೇಳೆ ಗುರೂಜಿ ಮತ್ತು ರೂಪೇಶ್ ಇಬ್ಬರೂ ಭಾವುಕರಾಗಿದ್ದಾರೆ.

ರೂಪೇಶ್ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. 13ನೇ ವಯಸ್ಸಿನಲ್ಲಿ ತಾಯಿನ್ನು ಕಳೆದುಕೊಂಡ ರೂಪೇಶ್ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿದ್ದೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಂದೆಯ ಸ್ಥಾನವನ್ನು ಆರ್ಯವರ್ಧನ್ ಗುರೂಜಿ ತುಂಬಿದ್ದಾರೆ ಎಂದು ರೂಪೇಶ್ ಭಾವುಕರಾಗಿದ್ದಾರೆ.

https://www.instagram.com/reel/Ch1smpKpQI0/?utm_source=ig_embed&utm_campaign=loading

ಬೊಂಬೆಯನ್ನು ಹಿಡಿದು ಆರ್ಯವರ್ಧನ್ ಗುರೂಜಿ ರೂಪೇಶ್‌ಗೆ ನೀಡಿದರು. ಮಗ ಎಂದುಕೊಂಡು ಇದನ್ನು (ಬೊಂಬೆ) ರೂಪೇಶ್ ಗೆ ನೀಡುತ್ತಿದ್ದೀನಿ ಎಂದು ಗುರೂಜಿ ಹೇಳಿದರು. ಬಳಿಕ ರೂಪೇಶ್ ಗುರೂಜಿ ಕಾಲು ಮುಟ್ಟಿ ನಮಸ್ಕರಿಸಿ ಬೊಂಬೆ ಸ್ವೀಕರಿಸಿದರು.

ಬಳಿಕ ತನ್ನ ನೋವಿನ ಕಥೆ ಬಿಚ್ಚಿಟ್ಟ ರೂಪೇಶ್‌, ’13 ವರ್ಷ ಇರ್ತಾ ತಾಯಿ ತೀರಿ ಕೊಂಡ್ರು. ತಂದೆ ಪ್ರೀತಿ ತುಂಬಾ ಬೇಕಿತ್ತು. ತಂದೆ ಸ್ಥಾನವನ್ನು ಗುರೂಜಿ ತುಂಬಿಸಿದ್ದಾರೆ. ಅವರು ಕಂದ, ಮಗ ಎಂದು ಕರೆಯುವಾಗ ಅಪ್ಪನ ನೆನಪು ಬರ್ತಿತ್ತು’ ಎಂದು ತಬ್ಬಿ ಭಾವುಕರಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!