ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಇಂದು ಮತದಾನದ ವೇಳೆ ಕರ್ತವ್ಯ ನಿರತ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಸುಪೌಲ್ನಲ್ಲಿ ಚುನಾವಣೆಗೆ ಕರ್ತವ್ಯಕ್ಕೆಂದು ನೇಮಿಸಿರುವ ಅಧಿಕಾರಿ ಮತ್ತು ಅರಾರಿಯಲ್ಲಿ ಹೋಮ್ ಗಾರ್ಡ್ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರಿಗೂ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ನಿಧನದ ಕಾರಣ ಏಪ್ರಿಲ್ 26ರಂದು ನಡೆಯಬೇಕಿದ್ದ ಎರಡನೇ ಹಂತದ ಮತದಾನವನ್ನು ಮುಂದೂಡಲಾಗಿತ್ತು.