Saturday, August 13, 2022

Latest Posts

ಕತ್ತಿ ಹಿಡಿದು ಶಾಲೆ ಬಳಿ ವ್ಯಕ್ತಿಯ ದಾಂಧಲೆ: ಶಿಕ್ಷಕನನ್ನು ಕೊಲೆ ಮಾಡುವುದಾಗಿ ಬೆದರಿಕೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವ್ಯಕ್ತಿಯೊಬ್ಬ ಕತ್ತಿ ಹಿಡಿದು ಶಾಲೆ ಬಳಿ ದಾಂಧಲೆ ನಡೆಸಿರುವ ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ. ತನ್ನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ಶಾಲೆಗೆ ತೆರಳಿದ ವ್ಯಕ್ತಿ ಶಿಕ್ಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅರೆ ನಗ್ನ ಅವಸ್ಥೆಯಲ್ಲಿ ದೊಡ್ಡದಾದ ಕತ್ತಿ ಹಿಡಿದು ವ್ಯಕ್ತಿಯ ರಂಪಾಟ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶಾಲೆಯ ಮುಖ್ಯೋಪಾಧ್ಯಾಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ವಿವರ ನೀಡಿದ್ದಾರೆ. ಜೋಕಿಹತ್ ಬ್ಲಾಕ್ ವ್ಯಾಪ್ತಿಯ ಭಗವಾನ್‌ಪುರ ಪಂಚಾಯತ್‌ನ ಅಕ್ಬರ್ ಎಂಬ ವ್ಯಕ್ತಿ ತನ್ನ ಮಕ್ಕಳು ಓದುವ ಶಾಲೆಯ ಬಳಿ ವಾಸಿಸುತ್ತಿದ್ದಾರೆ. ತನ್ನ ಮಕ್ಕಳಿಗೆ ಶಾಲೆಯಿಂದ ಬರಬೇಕಾದ ಪುಸ್ತಕ ಮತ್ತು ಸಮವಸ್ತ್ರ ಇದುವರೆಗೂ ತಲುಪಿಲ್ಲ. ಅವುಗಳ ಬದಲಿಗೆ ಹಣ ನೀಡುವಂತೆ ಮುಖ್ಯೋಪಾಧ್ಯಾಯರಿಗೆ ಬೆದರಿಕೆ ಹಾಕಿದ್ದಾನೆ.

ಹಣ ನೀಡದಿದ್ದರೆ ಕತ್ತಯಿಂದ ಇರಿದು ಸಾಯಿಸುವುದಾಗಿ ಬೆದರಿಕೆ ಹಾಕಿ ಕೊನೆಗೆ ಅಲ್ಲಿಂದ ಹೊರಟು ಹೋದ. ಆದರೆ, ಪದೇ ಪದೇ ಶಾಲೆ ಬಳಿ ಬಂದು ಇಂತಹ ಬೆದರಿಕೆ ಹಾಕುತ್ತಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯರು ದೂರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss