ಇದು ನಿಜ: ಈ ಹಲ್ಲಿಯ ಬೆಲೆ ಅಕ್ಷರಶಃ ಕೋಟಿ ರೂಪಾಯಿ: ಹಲ್ಲಿ ಕದ್ದ ಐವರು ಪೊಲೀಸರ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಲ್ಲಿಗೆ ಕೋಟ್ಯಂತರ ರೂಪಾಯಿ ಬೆಲೆ ಎಂದರೇನು? ನಂಬಲೇಬೇಕು. ವಾಸ್ತವವಾಗಿ, ಹಲ್ಲಿಯನ್ನು ಅಪಶಕುನ ಎಂದು ಕರೆಯಲಾಗುತ್ತದೆ. ಅದನ್ನು ನೋಡಲು ಸಹ ಬಯಸುವುದಿಲ್ಲ. ಇಂಥದ್ದಕ್ಕೆ 1 ಕೋಟಿ ರೂಪಾಯಿ ಬೆಲೆ ಕಟ್ಟುವುದು ಕಾಮಿಡಿ ಅನ್ನಿಸಬಹುದು. ಆದರೆ, ಇದು ನಿಜ. ಈ ಹಲ್ಲಿ ಸಾಮಾನ್ಯ ಹಲ್ಲಿಯಲ್ಲ, ಅಪರೂಪದ ಹಲ್ಲಿ.

ಇದು ಟೋಕೆ ಗೆಕ್ಕೊ ವಿಧದ ಹಲ್ಲಿ. ಇದು ಪ್ಲಾಸ್ಟಿಕ್ ಹಲ್ಲಿಯಂತೆ ಕಾಣುತ್ತದೆ. ಇದು ಅಳಿವಿನಂಚಿನಲ್ಲಿರುವ ಜಾತಿಗಳ ಪಟ್ಟಿಯಲ್ಲಿದೆ. ಅಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 1ಕೋಟಿ ಅಂದರೆ ಅತಿಶಯೋಕ್ತಿಯಲ್ಲ. ಬಿಹಾರದ ಪುರ್ನಿಯಾ ಜಿಲ್ಲೆಯ ಮೆಡಿಕಲ್ ಸ್ಟೋರ್‌ನಿಂದ ಪೊಲೀಸರು ಈ ಅಪರೂಪದ ಟೋಕೆ ಗೆಕ್ಕೋ ಹಲ್ಲಿ ಮತ್ತು ಮಾದಕ ಕೆಮ್ಮು ಸಿರಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಅಳಿವಿನಂಚಿನಲ್ಲಿರುವ ತಕ್ಷಕ್ ಜಾತಿಗೆ ಸೇರಿದ ಹಲ್ಲಿ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಟೋಕೆ ಗೆಕ್ಕೋವನ್ನು ಪಶ್ಚಿಮ ಬಂಗಾಳದಿಂದ ಬಿಹಾರಕ್ಕೆ ತಂದಿದ್ದು, ಅಲ್ಲಿಂದ ಈ ಹಲ್ಲಿಯನ್ನು ದೆಹಲಿಗೆ ಕೊಂಡೊಯ್ಯುವ ಯೋಜನೆ ನಡೆದಿರುವುದು ಕಂಡುಬಂದಿದೆ. ಈ ಘಟನೆಯಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಇವುಗಳನ್ನು ಮಧುಮೇಹ, ಏಡ್ಸ್ ಮತ್ತು ಕ್ಯಾನ್ಸರ್ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತಕ್ಷಕ್ಕೆ ಉತ್ತಮ ಬೇಡಿಕೆ ಇದ್ದು, ಹಲವು ದೇಶಗಳಲ್ಲಿ ಇದನ್ನು ಅದೃಷ್ಟದ ಸಂಕೇತವಾಗಿಯೂ ಪರಿಗಣಿಸಲಾಗಿದೆ ಎಂದು ವಿವರಿಸಿದರು. ಹಲ್ಲಿ ಕಳ್ಳಸಾಗಣೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬೈಸಿ ಪ್ರದೇಶದ ಮೆಡಿಕಲ್ ಸ್ಟೋರ್ ನಲ್ಲಿ ತಪಾಸಣೆ ನಡೆಸಿ ಈ ಅಪರೂಪದ ಹಲ್ಲಿಯನ್ನು ಸೆರೆಹಿಡಿಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!