ಆರು ವರ್ಷದ ಬಾಲಕನನ್ನು ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದಲ್ಲಿ ಆರು ವರ್ಷದ ವಿದ್ಯಾರ್ಥಿಯನ್ನು ಟ್ಯೂಷನ್ ಶಿಕ್ಷಕನೊಬ್ಬ ಬೆತ್ತದಿಂದ ಮನಸೋ ಇಚ್ಛೆ ಥಳಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಶಿಕ್ಷಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ ಕೇಳಿ ಬಂದಿತ್ತು. ಇದೀಗ ಧನರುವಾ ಪೊಲೀಸರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಶಿಕ್ಷಕ ವಿದ್ಯಾರ್ಥಿಗೆ ಹೊಡೆದದ್ದು ಏಕೆ ಎಂಬುದರ ಬಗ್ಗೆ ಅಲ್ಲಿನ ಪೊಲೀಸ್‌ ಅಧಿಕಾರಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಶಿಕ್ಷಕ ಅಮರ್ ಕಾಂತ್ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿರುವುದನ್ನು ಈ ಆರು ವರ್ಷದ ಬಾಲಕ ನೋಡಿದ್ದಾನೆ. ಈ ವಿಚಾರ ಎಲ್ಲರಿಗೂ ಎಲ್ಲಿ ಹೇಳುತ್ತಾನೋ ಎಂಬ ಭಯದಿಂದ ಬಾಲಕನ ಬಾಯಿ ಮುಚ್ಚಿಸಲು ದೊಡ್ಡ ಕೋಲಿನಿಂದ ಮನಸೋ ಇಚ್ಛೆ ಥಳಿಸಿ, ಕೂದಲು ಹಿಡಿದು ಎಳೆದಾಡಿದ್ದಾನೆ. ಕ್ರೂರಿ ಶಿಕ್ಷಕನ ಹೊಡೆತಕ್ಕೆ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದನ್ನು ಯಾರೋ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಾಗಲೇ ಈ ಘಟನೆ ಬೆಳಕಿಗೆ ಬಂದಿದ್ದು. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆಗೆ ವಿಶೇಷ ತಂಡವನ್ನು ನೇಮಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!