Thursday, December 8, 2022

Latest Posts

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಹೊಸದಿಗಂತ ವರದಿ ಕಲಬುರಗಿ: 

ರಸ್ತೆಯ ಬದಿಯಲ್ಲಿ ನಿಂತಿರುವ ಲಾರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಕಮಲಾಪುರ ತಾಲೂಕಿನ ನಾವದಗಿ (ಬಿ) ಸಮೀಪ ನಡೆದಿದೆ.

ನಾವದಗಿ ಬಿ,ಯ ಗೋಗಿ ತಾಂಡಾದ ನಿವಾಸಿ ದೀಪಕ ಗೋವಿಂದ ರಾಠೋಡ್ (45), ಈತನ ಸಹೋದರನ ಪುತ್ರ ಪಿಯುಸಿ ವಿದ್ಯಾರ್ಥಿ ಯುವರಾಜ್ ರಾಠೋಡ್ (17), ಹಾಗೂ ರಾಹುಲ್ ಖೇಮು ಚವ್ಹಾಣ (17) ಮೃತಪಟ್ಟ ದುರ್ದೈವಿಗಳು. ಮೃತರೆಲ್ಲರೂ ಪರಿವಾರದೊಂದಿಗೆ ಕೂಡಿ ದೇವರ ಹರಕೆಯನ್ನು ತಿರಿಸಲು ಸಾವಳಗಿ ತಾಂಡ ಕಡೆಗೆ ಹೋಗುತ್ತಿದ್ದು, ಈ ಸಮಯದಲ್ಲಿ ದುರಂತ ಜರುಗಿದೆ.

ಮೃತ ದೇಹಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗೋಗಿ ತಾಂಡಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಗಾಂವ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!