Monday, September 25, 2023

Latest Posts

ಇಂದು ಮಧ್ಯರಾತ್ರಿಯಿಂದಲೇ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಯಲ್ಲಿ ಬೈಕ್​​, ಆಟೋ ಸಂಚಾರ ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ (Mysuru-Bengaluru Expressway)ಯಲ್ಲಿ ಬೈಕ್​, ಆಟೋ ಮತ್ತು ಟ್ರ್ಯಾಕ್ಟರ್‌ ಸಂಚಾರಕ್ಕೆ ಆಗಸ್ಟ್ 1 ರಿಂದ ನಿರ್ಬಂಧ ಜಾರಿಯಾಗಲಿದ್ದು, ಇಂದು ಮಧ್ಯರಾತ್ರಿಯಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಸದ್ಯ ಈ ಆದೇಶದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲ ಬೈಕ್ ಸವಾರರಿಗೆ ಆದೇಶದಿಂದ ಶಾಕ್​​ ಆಗಿದ್ದು, ಅಪಘಾತ ಬರೀ ಬೈಕ್‌ನಿಂದ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅದೇ ರೀತಿಯಾಗಿ ಆಟೋ ಸವಾರರಿಂದ ಮಿಶ್ರ ಪ್ರತಿಕ್ರಿಯೆವಾಗಿದ್ದು, ಗೂಡ್ಸ್ ಆಟೋ ಚಾಲಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ರಸ್ತೆಯಲ್ಲಿ ಖುಷಿಯಾಗಿ ಓಡಾಡುತ್ತೇವೆ. ಅದಕ್ಕೆ ಬ್ರೇಕ್ ಹಾಕಿರುವುದಿ ಬೇಜಾರಾಗಿದೆ. ಇಷ್ಟು ಚೆನ್ನಾಗಿ ರಸ್ತೆ ಮಾಡಿ ಓಡಾಡಬೇಡಿ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮತ್ತೆ ಕೆಲ ಆಟೋ ಚಾಲಕರು ಆದೇಶ ಸ್ವಾಗತಿಸಿದ್ದು, ಒಳ್ಳೆಯದೇ ಆಯ್ತು ಸರ್, ನಾವು ಸರಿಯಾಗಿ ಓಡಿಸುತ್ತಿರಲಿಲ್ಲ. ನಮ್ಮಿಂದ ಬೈಕ್‌ನಿಂದ ಅಪಘಾತ ಜಾಸ್ತಿ ಆಗುತ್ತಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!