ಹೊಸದಿಗಂತ ವರದಿ, ಬಸವನಬಾಗೇವಾಡಿ:
ಪಟ್ಟಣದ ವಿಜಯಪುರ ರಸ್ತೆಯ ಹನುಮಾನ ದೇವಾಲಯದ ಹತ್ತಿರ ಸೋಮವಾರ ಸಂಜೆ ವಿಜಯಪುರದ ಕಡೆಗೆ ಹೊರಟಿದ ಬೊಲೆರೋ ವಾಹನಕ್ಕೆ ಬೈಕ್ ಸವಾರ ಹಿಂದಿನಿoದ ಡಿಕ್ಕಿ ಹೊಡೆದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಬೈಕ್ ಸವಾರ ವಿಜಯಪುರ ತಾಲೂಕಿನ ಸವನಹಳ್ಳಿ ಗ್ರಾಮದ ಯುವಕ ಸುನೀಲ ರಮೇಶ ಚಲವಾದಿ(೨೬) ಎಂದು ಗುರುತಿಸಲಾಗಿದ್ದು. ಮೃತ ಬೈಕ್ ಸವಾರ ಬಸವನಬಾಗೇವಾಡಿ ಕಡೆಯಿಂದ ವಿಜಯಪುರ ಕಡೆಗೆ ಹೊರಟಿದ್ದ ಎಂದು ತಿಳಿದು ಬಂದಿದೆ. ಈ ಘಟನೆ ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.