ಹೊಸದಿಗಂತ ವರದಿ,ಅಂಕೋಲಾ:
ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ತಾಲೂಕಿನ ಹಿಲ್ಲೂರು ಬಳಿ ಸಂಭವಿಸಿದ್ದು ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕರ್ಣ ಸಮೀಪದ ಹನೇಹಳ್ಳಿ ನಿವಾಸಿ ಶೇಖರ ಆಗೇರ(19) ಮೃತ ದುರ್ದೈವಿಯಾಗಿದ್ದು ಹಿಂಬದಿಯಲ್ಲಿ ಕುಳಿತಿದ್ದ ಹನೇಹಳ್ಳಿ ನಿವಾಸಿ 17 ವರ್ಷದ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ.
ಹಿಲ್ಲೂರು ಕಡೆಯಿಂದ ಗೋಕರ್ಣ ಕ್ರಾಸ್ ಕಡೆ ಬರುತ್ತಿದ್ದ ಬೈಕ್ ಸವಾರ ಲಾರಿಯನ್ನು ಓವರಟೇಕ್ ಮಾಡುವ ಯತ್ನದಲ್ಲಿದ್ದಾಗ ಎದುರಿನಿಂದ ಕಾರು ಬಂದ ಕಾರಣ ನಿಯಂತ್ರಣ ತಪ್ಪಿ ಲಾರಿಯ ಇಂಧನ ಟ್ಯಾಂಕಿಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಕಾರವಾರ ಡಿ.ವೈ.ಎಸ್. ಪಿ ಅಶ್ವಿನಿ, ಅಂಕೋಲಾ ಪೊಲೀಸ್ ನಿರೀಕ್ಷಕ ಶ್ರೀಕಾಂತ ತೋಟಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪಿ.ಎಸ್. ಐ ಜಯಶ್ರೀ ಪ್ರಭಾಕರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.