ಹೊಸದಿಗಂತ ವರದಿ ಹುಬ್ಬಳ್ಳಿ:
ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿಹೊಡೆದಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿರುವ ಘಟನೆ ಭೈರಿದೇವರಕೊಪ್ಪದ ಈಶ್ವರ ದೇವಸ್ಥಾನದ ಎದುರು ಶುಕ್ರವಾರ ರಾತ್ರಿ ನಡೆದಿದೆ.
ಧಾರವಾಡದ ಹಂಗರಕಿ ಗ್ರಾಮದ ಹಮಾಲಿ ಕಾರ್ಮಿಕ ಬಸವರಾಜ ಅಲಿಯಾಸ್ ಗಾಮೇಶ (45), ಕುಂದುಗೊಳ ತಾಲ್ಲೂಕಿನ ಯಲಿವಾಳ ಗ್ರಾಮದ ನಿವಾಸಿ ಬೈಕ್ ಸವಾರ ಮುಕ್ತುಂ ಹುಸೇನ್ ಕುರುಹಟ್ಟಿ (21) ಮೃತ ದುರ್ದೈವಿಗಳು.
ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಮುಕ್ತುಂ, ಈಶ್ವರ ದೇವಸ್ಥಾನದ ಕಡೆಯಿಂದ ಎಪಿಎಂಸಿಗೆ ಹೋಗಲು ರಸ್ತೆ ದಾಟುತ್ತಿದ್ದ ಬಸವರಾಜ ಅವರಿಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ತೀವ್ರತೆಗೆ ಮುಕ್ತುಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಬಸವರಾಜ ಅವರನ್ನು ಕಿಮ್ಸ್‌ಗೆ ಸಾಗಿಸುವಾಗ ಮೃತಪಟ್ಟಿರುವುದಾಗಿ ಉತ್ತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರಮೇಶ ಗೋಕಾಕ ತಿಳಿಸಿದ್ದಾರೆ.
ಉತ್ತರ ಪೊಲೀಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.