Saturday, January 28, 2023

Latest Posts

ಅಪರಿಚಿತ ವಾಹನ ಹರಿದು ಬೈಕ್ ಸವಾರ ಸಾವು

ಹೊಸದಿಗಂತ ವರದಿ, ವಿಜಯಪುರ:

ಅಪರಿಚಿತ ವಾಹನ ಹರಿದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಕ್ರಾಸ್ ಬಳಿಯ ನಾಲತವಾಡ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ

ಮೃತಪಟ್ಟವನನ್ನು ಬಾಗಲಕೋಟೆ ಜಿಲ್ಲೆಯ ಕಿರಸೂರ ಗ್ರಾಮದ ಸಂಗಪ್ಪ ಭೀಮಶೆಪ್ಪ ಈರಗಾರ (35) ಎಂದು ಗುರುತಿಸಲಾಗಿದೆ.

ಸಂಗಪ್ಪ ಈರಗಾರ ಈತ ಹತ್ತಿರದ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದು ಬಂದಿದ್ದು, ಬೈಕ್ ನಲ್ಲಿ ತೆರಳುತ್ತಿದ್ದಾಗ, ಅಪರಿಚಿತ ವಾಹನ ಹರಿದು ಸ್ಥಳದಲ್ಲೆ ಅಸುನೀಗಿದ್ದಾನೆ.

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ ಐ ಆರೀಫ್ ಮುಷಾಪುರಿ ಭೇಟಿ ನೀಡಿ, ಪರಿಶೀಲಿದರು.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!