ಬೈಕ್ ಕಳವು ಪ್ರಕರಣ: ಆರೋಪಿ ಬಂಧನ, 14 ಬೈಕ್‌ಗಳ ವಶ

ಹೊಸದಿಗಂತ ವರದಿ,ಮೈಸೂರು:

ದ್ವಿಚಕ್ರವಾಹನ ಕಳ್ಳನನ್ನು ಬಂಧಿಸಿರುವ ಮೈಸೂರಿನ ದೇವರಾಜ ಠಾಣೆ ಪೊಲೀಸರು ೬.೮೦ ಲಕ್ಷ ಮೌಲ್ಯದ ೧೪ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಆರತಿ ಉಕ್ಕಡದ ನಿವಾಸಿ ಸಂದೀಪ್ ಬಂಧಿತ ಆರೋಪಿ.ಈತನ ಬಂಧನದಿoದ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ೪ ಪ್ರಕರಣಗಳು,ಮಂಡಿ ಪೊಲೀಸ್ ಠಾಣೆಯ ೫ ಪ್ರಕರಣಗಳು,ಮೇಟಗಳ್ಳಿ ಠಾಣೆಯ ಒಂದು ಹಾಗೂ ವಿವಿಪುರಂ ಪೊಲೀಸ್ ಠಾಣೆಯ ಒಂದು ಪ್ರಕರಣ ಪತ್ತೆಯಾದಂತಾಗಿದೆ.

ಸoಚಾರ ಮತ್ತು ಅಪರಾಧ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ದೇವರಾಜ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಬಿ.ಶಿವಕುಮಾರ್,ಪಿಎಸ್ ಐಗಳಾದ ಜೈಕೀರ್ತಿ ಹಾಗೂ ಪ್ರಭು ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸುರೇಶ್, ಮಂಜುನಾಥ್, ದೇವರಾಜು,ಸೋಮಶೆಟ್ಟಿ, ವೇಣುಗೋಪಾಲ್,ನoದೀಶ್,ಮಾರುತಿ,ಪವನ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!