ಹೊಸದಿಗಂತ ವರದಿ, ಮಡಿಕೇರಿ:
ಬೈಕ್ ಹಾಗೂ ಟಿಟಿ ವಾಹನದ ನಡುವೆ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ತಾಳತ್ತಮನೆ ಜಂಕ್ಷನ್‍ನಲ್ಲಿ ನಡೆದಿದೆ.
ತಾಳತ್ತಮನೆ ನಿವಾಸಿ, ಪತ್ರಕರ್ತೆ ಉದಿಯಂಡ ಜಯಂತಿ ಅವರ ತಂದೆ ಉದಿಯಂಡ ಶಂಭು ಮಂದಣ್ಣ (62) ಎಂಬವರೇ ಮೃತ ದುರ್ಧೈವಿ. ಮೃತರು ಇಬ್ಬರು ಪುತ್ರರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರೊಂದಿಗೆ ಇಬ್ಬರು ಪುತ್ರಿಯರನ್ನೂ ಆಗಲಿದ್ದಾರೆ., ಶುಕ್ರವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ