ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಗಲಭೆ ಸಂತ್ರಸ್ತೆ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳು ಭಾನುವಾರ ರಾತ್ರಿ ಗೋಧ್ರಾ ಜೈಲಿನ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಜನವರಿ 21 ರೊಳಗೆ ಶರಣಾಗುವಂತೆ ಕೋರ್ಟ್ ಅಪರಾಧಿಗಳಿಗೆ ಸೂಚನೆ ನೀಡಿತ್ತು. ಅಂತೆಯೇ ತಡರಾತ್ರಿ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಬಿಲ್ಕಿನ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ, ಆಕೆಯ ಕುಟುಂಬ ಸದಸ್ಯರ ಹತ್ಯೆ ಪ್ರಕರಣದ ಅಪರಾಧಿಗಳು ಶರಣಾಗಲು ಹೆಚ್ಚು ಸಮಯ ಕೋರಿದ್ದರು, ಕುಟುಂಬದ ಜವಾಬ್ದಾರಿಗಳ ಉಲ್ಲೇಖ ಮಾಡಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ ಜ.21 ರಂದು ಶರಣಾಗುವಂತೆ ಸೂಚನೆ ನೀಡಿತ್ತು.