ರಾಮಮಂದಿರಕ್ಕೆ ಮೋದಿ ಆಗಮನ; ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ಕ್ಷಣಗಳು ಬಾಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ ಜನ್ಮಭೂಮಿ ಅಯೋಧ್ಯೆ ರಾಮ ಘೋಷಗಳಿಂದ ತುಂಬಿದೆ. ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಇಡೀ ನಗರ ರಾಮನ ಸ್ಮರಣೆಯಲ್ಲಿ ತೇಲಾಡುತ್ತಿದೆ. ಸಾವಿರಾರು ಗಣ್ಯರು, ವ್ಯಕ್ತಿಗಳು, ರಾಜಕೀಯ ನಾಯಕರು ಮತ್ತು ಸಂತರು ಅಯೋಧ್ಯೆಯನ್ನು ಪ್ರವೇಶಿಸಿದ್ದಾರೆ. ಶೀಘ್ರದಲ್ಲೇ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ ನಡೆಯಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಕೂಡ ಅಯೋಧ್ಯೆಗೆ ಆಗಮಿಸಿದ್ದಾರೆ.

ದೆಹಲಿಯಿಂದ ಹೊರಟು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರ ಪ್ರವೇಶಿಸಿದರು.

ಮೋದಿ ಮುಂದಿನ ಕಾರ್ಯಕ್ರಮಗಳ ವೇಳಾಪಟ್ಟಿ:

ಬೆಳಗ್ಗೆ 11ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2: ಸಾರ್ವಜನಿಕ ಭಾಷಣ ಮಾಡಲಿರುವ ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌
ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!