ಪ್ರಧಾನಿ ಮೋದಿ ನಿವಾಸದಲ್ಲಿ ಬಿಲ್ ಗೇಟ್ಸ್: ಕೋವಿಡ್, ಹವಾಮಾನ ವಿವಿಧ ವಿಚಾರಗಳ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನಿವಾಸಕ್ಕೆ ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ (Bill Gates) ಇಂದು ಭೇಟಿ ನೀಡಿದರು. ಈ ವೇಳೆ ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಆತ್ಮೀಯವಾಗಿ ಬರಮಾಡಿಕೊಂಡರು.

ಈ ಕುರಿತು ಒಂದು ಪ್ರೋಮೋವನ್ನು ಎಎನ್​ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ನಾಳೆ ಶುಕ್ರವಾರ ಇವರ ಭೇಟಿ ಮತ್ತು ಚರ್ಚೆಯ ಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಈ ಪ್ರೋಮೋದಲ್ಲಿರುವ (promo) ದೃಶ್ಯಗಳ ಪ್ರಕಾರ ಪ್ರಧಾನಿ ಮೋದಿ ಮತ್ತು ಬಿಲ್ ಗೇಟ್ಸ್ ಬಹಳ ಆತ್ಮೀಯವಾಗಿ ಮತ್ತು ಮುಕ್ತವಾಗಿ ಮಾತನಾಡುತ್ತಾರೆ, ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ತಂತ್ರಜ್ಞಾನ ಬಳಕೆಯಿಂದ ಹಿಡಿದು ಕೋವಿಡ್, ಹವಾಮಾನ ಬದಲಾವಣೆ ವಿರುದ್ಧ ನಡೆಯುತ್ತಿರುವ ಹೋರಾಟಗಳ ಸುತ್ತ ಮಾತುಕತೆ ನಡೆಯುತ್ತದೆ.

ಭಾರತದ ಬಗ್ಗೆ ನನಗಿರುವ ಒಂದು ಮೆಚ್ಚುಗೆ ಎಂದರೆ ಇದು ತಂತ್ರಜ್ಞಾನವನ್ನು ಬಳಸುತ್ತಿರುವುದು ಮಾತ್ರವಲ್ಲ, ಅದನ್ನು ಮುನ್ನಡೆಸುತ್ತಲೂ ಇದೆ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ. ತಂತ್ರಜ್ಞಾನ ವಿಚಾರವಾಗಿ ಮಾತನಾಡುತ್ತಾ ನರೇಂದ್ರ ಮೋದಿ ತಮ್ಮ ಮೊಬೈಲ್​ನಲ್ಲಿರುವ ಆ್ಯಪ್​ವೊಂದನ್ನು ಬಿಲ್ ಗೇಟ್ಸ್​ಗೆ ತೋರಿಸಿ, ಸೆಲ್ಫಿ ತೆಗೆಯಲು ಹೇಳುತ್ತಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕರು ವಾವ್ ಎಂದು ಉದ್ಗರಿಸುತ್ತಾರೆ.

ಹವಾಮಾನ ಬದಲಾವಣೆ ಸಮಸ್ಯೆ ಬಗೆಹರಿಸುವ ವಿಚಾರವನ್ನು ಬಿಲ್ ಗೇಟ್ಸ್ ಪ್ರಸ್ತಾಪಿಸುತ್ತಾರೆ. ಇದಕ್ಕೆ ಮೋದಿ ತಾವು ಹಾಕಿದ ಕೋಟ್ ಅಥವಾ ಜಾಕೆಟ್ ಅನ್ನು ತೋರಿಸುತ್ತಾರೆ. ಇದು ರೀಸೈಕಲ್ಡ್ ವಸ್ತುಗಳಿಂದ ತಯಾರಿಸಿದ ಜಾಕೆಟ್ ಎನ್ನುತ್ತಾರೆ.

ಕೋವಿಡ್ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಯಂತ್ರಣ ಮಾಡಿದ ಬಗ್ಗೆ ಬಿಲ್ ಗೇಟ್ಸ್ ವಿಚಾರ ಪ್ರಸ್ತಾಪ ಮಾಡುತ್ತಾರೆ. ಇದು ವೈರಸ್ ಮತ್ತು ಸರ್ಕಾರದ ನಡುವಿನ ಯುದ್ಧವಲ್ಲ, ಜೀವ ಮತ್ತು ವೈರಸ್ ನಡುವಿನ ಯುದ್ಧವಾಗಿತ್ತು ಎಂಬುದು ಪ್ರಧಾನಿಗಳ ಉತ್ತರಿಸುತ್ತಾರೆ.

ಇನ್ನು ಇವರಿಬ್ಬರ ಅನೌಪಚಾರಿಕ ಚರ್ಚೆಯ ಪೂರ್ಣ ವಿಡಿಯೋ ತುಣಕನ್ನು ಮಾರ್ಚ್ 29ರಂದು ಬಿಡುಗಡೆ ಮಾಡಲಿದೆ. ನರೇಂದ್ರ ಮೋದಿ ಮತ್ತು ಬಿಲ್ ಗೇಟ್ಸ್ ಔಪಚಾರಿಕವಾಗಿ ಹಲವು ಬಾರಿ ಭೇಟಿಯಾಗಿದ್ದಾರೆ. ಫೆಬ್ರುವರಿ ಕೊನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಲ್ ಗೇಟ್ಸ್ ಇದೇ ಪ್ರಧಾನಿ ನಿವಾಸಕ್ಕೆ ತೆರಳಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದೇ ಮೊದಲ ಬಾರಿಗೆ ಅನೌಪಚಾರಿಕವಾಗಿ ಅವರಿಬ್ಬರು ಮಾತನಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!