ಶೀಘ್ರದಲ್ಲೇ ಡೇಟಾ ಗೌಪ್ಯತೆ ಮಸೂದೆಯನ್ನು ಸಿದ್ಧಪಡಿಸಲಾಗುವುದು: ವಿತ್ತ ಸಚಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೇಟಾ ಗೌಪ್ಯತೆ ಕುರಿತ ಮಸೂದೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದರು. ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಸ್ತುತ ಡೇಟಾ ಗೌಪ್ಯತೆ ಮಸೂದೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು,  ಶೀಘ್ರದಲ್ಲೇ ಸಂಸತ್ತಿನಲ್ಲಿ ಡೇಟಾ ಗೌಪ್ಯತೆಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಲಾಗುವುದು ಎಂದರು. ಗೌಪ್ಯತಾ ಮಸೂದೆ ಮೇಲಿರುವ ಎಲ್ಲ ಅನುಮಾನಗಳನ್ನು ಶೀಘ್ರವೇ ನಿವಾರಿಸಲಾಗುವುದು ಇದಕ್ಕಾಗಿ ಸಂಬಂಧಪಟ್ಟ ಎಲ್ಲ ತಜ್ಞರೊಂದಿಗೆ ಸಮಾಲೋಚಿಸಿ ಈ ಮಸೂದೆ ತರುತ್ತಿರುವುದಾಗಿ ತಿಳಿಸಿದರು.

ಇಂದು ದೆಹಲಿಯಲ್ಲಿ ಅಮೆರಿಕಾ-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ ಅವರು ಈ ಬಗ್ಗೆ ಮಾತನಾಡಿದರು. ಈ ನಡುವೆ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಕಳೆದ ತಿಂಗಳು ಲೋಕಸಭೆಯಿಂದ ಕೇಂದ್ರ ಸರ್ಕಾರ ಹಿಂಪಡೆದಿದೆ.  ಈ ಹಿಂದೆ ಹಲವಾರು ವಿವಾದಗಳ ಕಾರಣದಿಂದಾಗಿ ಈ ಮಸೂದೆಯನ್ನು ಹಿಂದಕ್ಕೆ ಪಡೆಯಲಾಗಿದೆ. ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿಯು 99 ಸೆಕ್ಷನ್‌ಗಳಿಗೆ 81 ತಿದ್ದುಪಡಿಗಳನ್ನು ಸೂಚಿಸಿದ ಬಳಿಕವೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದರ ಜೊತೆಗೆ 12 ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ. ಅದರಲ್ಲಿ ಡೇಟಾ ಗೌಪ್ಯತೆಗೆ ಹೊಸ ಮಸೂದೆ ತರಬೇಕು ಎಂಬುದು ಒಂದು. ಈ ವಿಧೇಯಕ ಮುಂದಿನ ಬಜೆಟ್ ಸಭೆಗಳಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!