Saturday, March 25, 2023

Latest Posts

ಲಾಡ್ಲೆ ಮಶಾಕ್ ದಗಾ೯ದ ಶಿವಲಿಂಗ ಪೂಜೆಗೆ ಭಕ್ತರ ದಂಡು: ಸುತ್ತಮುತ್ತಲಿನ ಗ್ರಾಮಗಳಿಂದ ಬಿಲ್ವಪತ್ರೆ ಅರ್ಪಣೆ

ಹೊಸದಿಗಂತ ವರದಿ ಕಲಬುರಗಿ:

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶಿವಲಿಂಗ ಪೂಜೆ ಹಿನ್ನೆಲೆಯಲ್ಲಿ ಆಳಂದ ಪಟ್ಟಣದ ಚೆಕ್ ಪೋಸ್ಟ್ ಬಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬಿಲ್ವಪತ್ರೆಗಳನ್ನು ತರಿಸಲಾಗಿದೆ. ಶಿವಲಿಂಗ ಪೂಜೆ ಹಾಗೂ ಭಜನೆ ಕಾಯ೯ಕ್ರಮಗಳು ನಡೆದಿದ್ದು, ಮಧ್ಯಾಹ್ನ 2 ಗಂಟೆಯ ನಂತರ ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶಿವಲಿಂಗ ಪೂಜೆಗೆ ನೆರವೇರಲಿದೆ.

ಆಳಂದ ಪಟ್ಟಣದ ಚೆಕ್ ಪೋಸ್ಟ್ ಬಳಿ ಪೆಂಡಾಲ್ ಹಾಕಿ ಶಿವರಾತ್ರಿ ಅಂಗವಾಗಿ ಶಿವಲಿಂಗ ಪೂಜೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಹಷಾ೯ನಂದ ಗುತ್ತೇದಾರ್, ಇಲ್ಲಿ ಶಿವಲಿಂಗಕ್ಕೆ ತಾಲೂಕಿನ ಅನೇಕ ಗ್ರಾಮಗಳಿಂದ ಬಿಲ್ವಪತ್ರೆ ತರಿಸಲಾಗಿದೆ. ಇದೇ ಬಿಲ್ವಪತ್ರೆಗಳನ್ನು ಮಧ್ಯಾಹ್ನ ಎರಡು ಗಂಟೆ ನಂತರ 15 ಜನ ಮುಖಂಡರ ಕೈಯಲ್ಲಿ ನೀಡಿ, ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶಿವಲಿಂಗ ಪೂಜೆಗೆ ಬಳಸಲಾಗುತ್ತದೆ ಎಂದರು.

ಬೆಳಿಗ್ಗೆಯಿಂದ ಆಳಂದ ಚೆಕ್ ಪೋಸ್ಟ್ ಬಳಿ ಶಿವರಾತ್ರಿ ಅಂಗವಾಗಿ ಭಜನೆ, ಸಂಕೀತ೯ನ ನಡೆದಿದ್ದು, ಮಧ್ಯಾಹ್ನದ ನಂತರ ವಿಶೇಷ ಪೂಜೆ ಆರಂಭವಾಗಲಿದೆ. ಮಹಾ ಶಿವರಾತ್ರಿ ಹಬ್ಬದ ದಿನದಂದು ಪೂಜೆ ಮಾಡಲು ಅವಕಾಶ ಸಿಕ್ಕಿದ್ದು, ಇಡೀ ಹಿಂದೂ ಸಮುದಾಯಕ್ಕೆ ಸಂತಸದ ಸಂಗತಿ ಆಗಿದೆ ಎಂದರು.

ಮುಂಬರುವ ದಿನಗಳಲ್ಲಿ ಎಲ್ಲರಿಗೂ ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶ್ರೀ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗ ಪೂಜೆ ಸಲ್ಲಿಸುವ ಅವಕಾಶ ಸಿಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!