ಮುದ್ದಾದ ಮಗುವಿಗೆ ಹೆಸರಿಟ್ಟ ಬಿಪಾಶಾ ಬಸು- ಕರಣ್ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಬಿಪಾಶಾ ಬಸು- ಕರಣ್ ಸಿಂಗ್ ಗ್ರೋವರ್ ದಂಪತಿ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟಿದ್ದಾರೆ.

ತಾವು ದೇವಿಯ ಆರಾಧಕರು ಆಗಿರುವ ಕಾರಣದಿಂದಾಗಿ ತಮ್ಮ ಮಗುವಿಗೆ ಅವರು ‘ದೇವಿ’ ಎಂದು ಹೆಸರಿಟ್ಟಿದ್ದಾರೆ. ತಮ್ಮ ಮನೆಗೆ ದೇವಿಯನ್ನು ಬರಮಾಡಿಕೊಂಡಿರುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಹಲವು ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ, ನಾಲ್ಕೈದು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದೇನೆ ಎಂದೂ ಬರೆದುಕೊಂಡಿದ್ದರು.

ಬಿಪಾಶಾಗೆ ಮಗುವಾಗುತ್ತಿದ್ದಂತೆಯೇ ಅವರ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಿಪಾಶಾ ಇಷ್ಟಪಟ್ಟಂತೆ ಅವರಿಗೆ ಹೆಣ್ಣು ಮಗುವೇ ಆಗಿದೆ ಎಂದು ಹಲವರು ಸಂಭ್ರಮಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!