Wednesday, December 7, 2022

Latest Posts

ಪ್ರಿಯಾಂಕ್ ಖಗೆ೯ ವಿರುದ್ಧ ಹೇಳಿಕೆ: ಬಿಜೆಪಿ ಮುಖಂಡ ರಾಠೋಡ್ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಹೊಸದಿಗಂತ ವರದಿ, ಕಲಬುರಗಿ:

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಶಾಸಕ ಪ್ರಿಯಾಂಕ್ ಖಗೆ೯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕರು,ಮುಖಂಡರು ಸೇರಿ ಕಾಂಗ್ರೆಸ್ ಭವನದಿಂದ ಪೋಲಿಸ್ ಭವನದವರೆಗೆ ಬೃಹತ್ ಪಾದಯಾತ್ರೆ ಮೂಲಕ ಕಲಬುರಗಿ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ ಅವರಿಗೆ ಮನವಿ ಸಲ್ಲಿಸಿದರು.

ಶೂಟ್ ಮಾಡುವುದಾಗಿ ಹೇಳಿಕೆ ನೀಡಿರುವ ಮಣಿಕಂಠ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಸಕಿ ಖನಿಜಾ ಫಾತಿಮಾ, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ್, ಅಲ್ಲಮಪ್ರಭು ಪಾಟೀಲ್, ನೀಲಕಂಠರಾವ್ ಮೂಲಗೆ, ರೇವು ನಾಯಕ ಬೆಳಮಗಿ, ಶರಣ ಕುಮಾರ್ ಮೋದಿ, ಚೇತನ್ ಗೋನಾಯಕ, ಸಂತೋಷ್ ಪಾಟೀಲ್, ಚಂದ್ರಿಕಾ ಪರಮೇಶ್ವರ್, ಲಚ್ಚಪ್ಪ ಜಮಾದಾರ, ರಾಜೇಶ್ ಗುತ್ತೇದಾರ್, ಶಿವಾನಂದ ಹೊನಗುಂಟಿ, ಲಿಂಗರಾಜ ಕಣ್ಣಿ, ಸಚಿನ್ ಶಿರವಾಳ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!