ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು, ಕರಣ್ ಸಿಂಗ್ ಜೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಂತರ, ನಟರಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮೊದಲ ಮಗುವಿನ ಪೋಷಕರಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಭೂಷಣ್ ಪಟೇಲ್ ಅವರು ನಿರ್ದೇಶಿಸಿದ 2015 ರ ಭಯಾನಕ ಚಲನಚಿತ್ರ ‘ಅಲೋನ್’ ಸೆಟ್‌ನಲ್ಲಿ ಮೊದಲು ಪರಸ್ಪರ ಭೇಟಿಯಾದ ಅವರಲ್ಲಿ ಪ್ರೀತಿ ಶುರುವಾಯಿತು. ಏಪ್ರಿಲ್ 2016 ರಲ್ಲಿ, ಬಿಪಾಶಾ ಮತ್ತು ಕರಣ್ ತಮ್ಮ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ವರದಿಗಳ ಪ್ರಕಾರ, ಅವರ ಮದುವೆಯಾದ ಆರು ವರ್ಷಗಳ ನಂತರ, ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಬಿಪಾಶಾ ಮತ್ತು ಕರಣ್ ಶೀಘ್ರದಲ್ಲೇ ಘೋಷಣೆ ಮಾಡಲಿದ್ದಾರೆ ಎಂದು ವರದಿ ಹೇಳಿದೆ. ವರದಿಯಲ್ಲಿ ಬಿಪಾಶಾರ ಪ್ರೆಗ್ನೆಂಸಿಯ ಬಗ್ಗೆ ಹೇಳಿದ್ದರೂ, ಈ ಜೋಡಿಯಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!