March 27, 2026
Friday, March 27, 2026
spot_img

ಆಂಧ್ರದ ಚಿತ್ತೂರಿನಲ್ಲಿ ಹಕ್ಕಿ ಜ್ವರ ಪತ್ತೆ, ಕೊಪ್ಪಳದಲ್ಲಿ ತೀವ್ರ ನಿಗಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೆರೆಯ ಆಂಧ್ರ ಪ್ರದೇಶ ಜಿಲ್ಲೆಯ ಚಿತ್ತೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಕರ್ನಾಟಕದಲ್ಲಿಯೂ ಆತಂಕ ಹೆಚ್ಚಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ ಇರಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 25 ಮೊಟ್ಟೆ ಉತ್ಪಾದನಾ ಕೋಳಿ ಫಾರಂಗಳು ಹಾಗೂ 14 ಮಾಂಸ ಉತ್ಪಾದನಾ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿದ್ದು, ಕೋಳಿ ಶೀತ ಜ್ವರ ಹರಡುವಿಕೆ ತಡೆಯಲು ತೀವ್ರ ನಿಗಾವಹಿಸುವುದು ಅತ್ಯಗತ್ಯವಾಗಿದೆ.

ಪಕ್ಕದ ರಾಜ್ಯದಲ್ಲಿ ರೋಗೋದ್ರೇಕ ಕಂಡುಬಂದಿರುವುದರಿಂದ, ಜಿಲ್ಲೆಯ ಪಶುವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಕೋಳಿ ಫಾರಂ ಮಾಲೀಕರು ಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಸೂಚಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !