ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ರಿಮ್ಸ್ ಆಸ್ಪತ್ರೆಯಲ್ಲಿ ಒಂಬತ್ತು ತಿಂಗಳ ಮಗುವಿನಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ.
ರಾಮಗಢದ ನಿವಾಸಿಗಳ ಮಗುವಿಗೆ ಕೆಲ ದಿನಗಳಿಂದ ಜ್ವರ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರೀಕ್ಷೆಗಳ ನಂತರ ಮಗುವಿಗೆ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ. ಜಾರ್ಖಂಡ್‌ನಲ್ಲಿ ಇದು ಮೊದಲ ಹಕ್ಕಿ ಜ್ವರ ಪ್ರಕರಣವಾಗಿದೆ. ಸದ್ಯ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.