ಯುಕೆಯ ಚೆಸ್ಟರ್ ಮೃಗಾಲಯದಲ್ಲಿ ವಿಶಿಷ್ಟ ಆರ್ಡ್‌ವರ್ಕ್ ಮರಿ ಜನನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಕೆಯಲ್ಲಿರುವ ಚೆಸ್ಟರ್ ಮೃಗಾಲಯದಲ್ಲಿ ಅಪರೂಪದ ಆರ್ಡ್‌ವರ್ಕ್ ಮರಿ ಜನಿಸಿದೆ.
ಇದಕ್ಕೆ ಡೊಬಿ ಎಂದು ಹೆಸರಿಡಲಾಗಿದೆ. ಆರ್ಡ್‌ವರ್ಕ್ ಮರಿ ಆಫ್ರಿಕಾ ಮೂಲದ ಸಸ್ತನಿಯಾಗಿದೆ. ಕೂದಲುರಹಿತ ಸುಕ್ಕುಗಟ್ಟಿದ ಚರ್ಮ, ದೊಡ್ಡ ಕಿವಿ, ಗಂಡಲು, ದೊಡ್ಡ ಕಿವಿಗಳಿರುವ ಹೆಣ್ಣು ಮರಿ ಇದಾಗಿದೆ.
ಚೆಸ್ಟರ್ ಮೃಗಾಲಯ ತನ್ನ ಸಾಮಾಜಿಕ ಜಾಲತಾಣ ಖಾತೆಯಿಂದ ಡೊಬಿ ಫೋಟೊ ಪೋಸ್ಟ್ ಹಂಚಿಕೊಂಡಿದೆ. ಈ ವಿಶಿಷ್ಟ ಪ್ರಾಣಿ ಹ್ಯಾರಿ ಪಾಟರ್ ಸರಣಿಯ ಯಕ್ಷಿಣಿಯನ್ನು ಹೋಲುತ್ತಿದ್ದು, ಡೊಬಿ ಎನ್ನುವ ಹೆಸರು ಬಂದಿದೆ.
ಡೊಬಿಯನ್ನು ರಾತ್ರಿ ಪ್ರತ್ಯೇಕವಾಗಿ ಇಡಲಾಗುತ್ತದೆ. ಬೆಚ್ಚಗಿನ ಹಾಲು ನೀಡಲಾಗುತ್ತದೆ. ಅಮ್ಮ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಹೊಸ ಅತಿಥಿ ಆಗಮನದಿಂದ ಎಲ್ಲರಿಗೂ ಸಂತಸವಾಗಿದೆ ಎಂದು ಮೃಗಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!