ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಈರುಳ್ಳಿ, ಆಲೂಗಡ್ಡೆ, ಹೀರೇಕಾಯಿ, ಕ್ಯಾಪ್ಸಿಕಂ, ಇತರೆ ತರಕಾರಿಗಳ ಬೋಂಡ ನೋಡಿರುತ್ತೇವೆ..ತಿಂದಿರುತ್ತೇವೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬರುತ್ತಿರುವ ಖಾದ್ಯಗಳನ್ನು ನೋಡಿದರೆ, ತಲೆ-ಹೊಟ್ಟೆ ಎರಡೂ ತಿರುಗುತ್ತಿದೆ. ಐಸ್‌ಕ್ರೀಂ, ಚಾಕ್‌ಲೇಟ್‌ಗಳಿಂದ ಬಜ್ಜಿ ಬೋಂಡ ಮಾಡುತ್ತಿದ್ದಾರೆ.
ಇದೀಗ ಇಲ್ಲೊಬ್ಬ ಮಹಿಳೆ ಬಿಸ್ಕೆಟ್ ಬೋಂಡ ಮಾಡೋದನ್ನು ನೋಡಿ ನೆಟ್ಟಿಗರು ಗಾಬರಿಯಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಬಿಸ್ಕಟ್‌ಗೆ ಬೇಯಿಸಿದ ಆಲೂಗಡ್ಡೆ ಇಟ್ಟು, ಅದನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ತೇಲಿಸುತ್ತಿರುವ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಚಿತ್ರ ಬೋಂಡ ಹೇಗೆ ಮಾಡೋದು ಅಂತ ನೀವೂ ಒಮ್ಮೆ ನೋಡಿಬಿಡಿ..
https://twitter.com/i/status/1720473770581000349