ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ:
1 ಕಪ್ ಮೈದಾ ಹಿಟ್ಟು
ಚಿಟಿಕೆ ಉಪ್ಪು
ಚಿಟಿಕೆ ಅರಶಿನ ಪುಡಿ
3 ಸ್ಪೂನ್ ಬಿಸಿ ಎಣ್ಣೆ
ಮಾಡುವ ವಿಧಾನ:
ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅರಶಿನದೊಂದಿಗೆ ಬಿಸಿ ಎಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದದಲ್ಲಿ ಕಲಸಿ ಅರ್ಧಗಂಟೆಗಳ ಕಾಲ ಬಿಡಿ. ಒಂದು ಪ್ಯಾನ್ ಗೆ ಒಂದು ಸ್ಪೂನ್ ಶುದ್ಧ ತೆಂಗಿನ ಎಣ್ಣೆ, ಒಂದು ಟೀ ಸ್ಪೂನ್ ಸಾಸಿವೆ, ಸ್ವಲ್ಪ ಜೀರಿಗೆ, ಸ್ವಲ್ಪ ಉದ್ದಿನಬೇಳೆ, ಕರಿಬೇವು, ಕಾಲ್ ಕಪ್ ರವೆ ಹಾಕಿ ಚೆನ್ನಾಗಿ ಹುರಿಯಿರಿ. ಪರಿಮಳ ಬಂದ ನಂತರ ಅದಕ್ಕೆ 1 ಸ್ಪೂನ್ ಚಿಲ್ಲಿ ಪೌಡರ್, 1 ಸ್ಪೂನ್ ಸಾಂಬಾರ್ ಪೌಡರ್,ಸ್ವಲ್ಪ ಹಳದಿ, 1 ಸ್ಪೂನ್ ಸಕ್ಕರೆ, 5 ಟೇಬಲ್ ಸ್ಪೂನ್ ತೆಂಗಿನತುರಿ, ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ರೆಡಿಮಾಡಿ ತಣ್ಣಗಾಗುವ ತನಕ ಬಿಡಿ.
ಕಲಸಿಟ್ಟ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಯಂತೆ ಲಟ್ಟಿಸಿ ಅದರೊಳಗೆ ತಯಾರಿಸಿದ ಮಿಶ್ರಣವನ್ನಿಟ್ಟು ಮಡಚಿ, ಮೆಲ್ಲಗೆ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಬಿಸ್ಕೂಟ್ ರೊಟ್ಟಿ ರೆಡಿ…!