Wednesday, October 5, 2022

Latest Posts

ಗದರ್‌ ಚಳುವಳಿಯ ಕ್ರಾಂತಿಸಿಂಹ ಬಿಶನ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್ ( ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಪಂಜಾಬಿನ ಅಮೃತಸರದ ದಾದೇಹರ್ ಗ್ರಾಮದವರಾದ ಬಿಶನ್ ಸಿಂಗ್ ಅವರು ಗದರ್‌ ಚಳುವಳಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಅವರು ಫಿಲಿಪೈನ್ಸ್‌ನಲ್ಲಿ ಗದರ್ ಪಾರ್ಟಿಯ ಸಕ್ರಿಯ ಸದಸ್ಯರಾಗಿದ್ದರು ಮತ್ತು ಪಾರ್ಟಿಗೆ ಅತ್ಯಂತ ಉದಾರ ಆರ್ಥಿಕ ಬೆಂಬಲಿಗರಲ್ಲಿ ಒಬ್ಬರು. ಅವರು ಗದರ್ ಪಕ್ಷದ ಇನ್ನೊಬ್ಬ ಪ್ರಮುಖ ನಾಯಕ ವಸಾಖಾ ಸಿಂಗ್ ಅವರ ನಿಕಟ ಸಹವರ್ತಿಯಾಗಿದ್ದರು. 1915 ರ ಆರಂಭಿಕ ತಿಂಗಳುಗಳಲ್ಲಿ ಭಾರತಕ್ಕೆ ಮರಳಿದ ಅವರು ಪಂಜಾಬಿನಲ್ಲಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
19 ಫೆಬ್ರವರಿ 1915 ರಂದು ಮಿಯಾನ್ ಮಿರ್ ಕಂಟೋನ್ಮೆಂಟ್‌ ನಲ್ಲಿ ನಡೆಯುತ್ತಿದ್ದ ದಂಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ಆದರೆ, ಇದರ ಸುಳಿವು ಅರಿತು ಪ್ರತಿತಂತ್ರ ರೂಪಿಸಿದ ಬ್ರಿಟಿಷರು ಈ ಬೆಟಾಲಿಯನ್‌ಗಳನ್ನು ನಿಶ್ಯಸ್ತ್ರಗೊಳಿಸಿದರು. ಇದರಿಂದ ಗದರ್ ಪಾರ್ಟಿಯ ಯೋಜನೆ ವಿಫಲವಾಯಿತು. ಈ ಸಂದರ್ಭದಲ್ಲಿ ಬಿಶನ್ ಸಿಂಗ್ ಅವರನ್ನು ಬಂಧಿಸಲಾಯಿತು ಮತ್ತು ಮೊದಲ ಲಾಹೋರ್ ಪಿತೂರಿ ಪ್ರಕರಣದಲ್ಲಿ, ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121, 121 ಎ ಮತ್ತು 122 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ನ್ಯಾಯಾಧೀಶರು ತಮ್ಮ ತೀರ್ಪನ್ನು ಸೆಪ್ಟೆಂಬರ್ 13, 1915 ರಂದು ನೀಡಿದರು. ಅವರಿಗೆ ಮರಣದಂಡನೆ ವಿಧಿಸಿ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಲಾಯಿತು. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲಾರ್ ಜೈಲಿನಲ್ಲಿದ್ದಾಗ ವೈಸರಾಯ್ ಹಾರ್ಡಿಂಜ್ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದರು. 1920 ರಲ್ಲಿ ಬ್ರಿಟಿಷ್ ಸರ್ಕಾರವು ರಾಯಲ್ ಅಮ್ನೆಸ್ಟಿಯನ್ನು ಘೋಷಿಸಿದಾಗ, ಅವರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ ಅವರು ಅಕಾಲಿ ಚಳವಳಿಯಲ್ಲಿ ತೊಡಗಿಕೊಂಡರು. ನಂತರ ಸುವರ್ಣ ಸೌಧದಲ್ಲಿ ಸೇವಾದಾರರಾಗಿ ಕೆಲಸ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!