ಬಿಸಿಲು.. ಬಿಸಿಲು.. ಕೆಎಮ್‌ಎಫ್‌ ಉತ್ಪನ್ನಗಳಿಗೆ ಭಾರೀ ಡಿಮ್ಯಾಂಡ್‌, ದಾಖಲೆಯ ಮಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದಲ್ಲಿ ಬಿಸಿಲ ಧಗೆಯಿಂದ ಜನ ಕಂಗಾಲಾಗಿದ್ದು, ದ್ರವ ಆಹಾರಗಳ ಮೊರೆ ಹೋಗಿದ್ದಾರೆ. ಈ ಕಾರಣದಿಂದಾಗಿ ಕೆಎಮ್‌ಎಫ್‌ಗೆ ಭಾರೀ ಕಮಾಯಿ ಆಗುತ್ತಿದೆ.

ರಾಜಧಾನಿ ಬೆಂಗಳೂರಿನ ಜನ ಹಾಲು, ಮೊಸರು, ಮಜ್ಜಿಗೆ, ಜ್ಯೂಸ್‌ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದು, ಕೆಎಮ್‌ಎಫ್‌ ಸಂತಸ ಹಂಚಿಕೊಂಡಿದೆ. ಬಿಸಿಲಿನ ತಾಪ ತಾಳಲಾರದೆ ಬೆಂಗಳೂರು ಮಂದಿ ತಂಪು ಪಾನಿಯಗಳತ್ತ ಮುಖ ಮಾಡುತ್ತಿದ್ದಾರೆ. ಹಣ್ಣಿನ ಜ್ಯೂಸ್​ಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್​​ನ ನಂದಿನಿ ಮೊಸರು, ಮಜ್ಜಿಗೆ, ಐಸ್ ಕ್ರೀಮ್​ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಒಂದೇ ದಿನ ಬೆಂಗಳೂರಿನಲ್ಲಿ 16 ಲಕ್ಷ ಲೀಟರ್​ ಮೊಸರು ಮಾರಾಟವಾಗಿದ್ದು, ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.

ಕೆಎಂಎಫ್​ ಮೊದಲು ಪ್ರತಿದಿನ 42 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿತ್ತು. ಆದರೆ ಈ ವರ್ಷ 47 ಲಕ್ಷ ಲೀಟರ್​ನಷ್ಟು ಹಾಲು ಮಾರಾಟವಾಗುತ್ತಿದೆ. ಇನ್ನು ಮೊಸರು ಮೊದಲು ಪ್ರತಿದಿನ 10 ಲಕ್ಷ ಲೀಟರ್​ನಷ್ಟು ಮಾರಾಟವಾಗುತ್ತಿತ್ತು. ಆದರೆ ಈ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕಳೆದ ಎರಡು ತಿಂಗಳಿನಿಂದ ನಂದಿನಿ ಮೊಸರಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಏಪ್ರಿಲ್​ 6ರಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ. ಆದರೆ ರಾಮನವಮಿಯ ದಿನದಂದು ಈ ದಾಖಲೆ ಮುರಿದಿದ್ದು, ಒಟ್ಟು 16 ಲಕ್ಷ ಲೀಟರ್​​ದಷ್ಟು ಮೊಸರು ಮಾರಾಟವಾಗಿದೆ. ಕೆಎಂಎಫ್ ಇತಿಹಾಸದಲ್ಲೆ ಇದು ದಾಖಾಲೆಯ ಮಾರಟವಾಗಿದೆ.

ಈ ಹಿಂದೆ ಮಜ್ಜಿಗೆ ಹಾಗೂ ಲಸ್ಸಿ ಪ್ರತಿದಿನ 1.10 ಲಕ್ಷ ಲೀಟರ್ ನಷ್ಟು ಮಾರಾಟ ಆಗುತ್ತಿತ್ತು. ‌ಆದರೆ ಈ ವರ್ಷ ಒಂದೂವರೆ‌ ಲಕ್ಷ ಲೀಟರ್​ನಷ್ಟು ಮಾರಾಟವಾಗುತ್ತಿದೆ. ಇನ್ನು, ಐಸ್ ಕ್ರೀಮ್ ಶೇ 36 ರಷ್ಟು ಮಾರಾಟವಾಗುತ್ತಿದ್ದು, ಒಟ್ಟು 16 ಸಾವಿರ ಲೀಟರ್ ಮಾರಾಟ ಆಗಿತ್ತು. ಈ ವರ್ಷದ ಬೇಸಿಗೆಯಲ್ಲಿ ಒಟ್ಟು 25,439 ಲೀಟರ್ ಐಸ್ ಕ್ರೀಮ್ ಮಾರಾಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!