ಕಹಿ ಹಾಗಲಕ್ಕೆ ಎಷ್ಟೆಲ್ಲ ಸ್ವೀಟ್ ನ್ಯೂಸ್ ಕೊಡೋ ತಾಕತ್ತಿದೆ ಗೊತ್ತಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಧುಮೇಹ ರೋಗಿಗಳು ನಿತ್ಯವೂ ಹಾಗಲಕಾಯಿ ರಸಸೇವಿಸಿದರೆ ರೋಗ ನಿಯಂತ್ರಣವಾಗುತ್ತದೆ. ಹಾಗಲಕಾಯಿ ಸೇವನೆಯಿಂದ ಜಠರದಲ್ಲಿರುವ ಜಂತುಹುಳ ನಿವಾರಣೆಯಾಗುತ್ತದೆ. ಒಂದು ಬಟ್ಟಲು ಹಾಗಲಕಾಯಿ ರಸದೊಂದಿಗೆ ಒಂದು ಚಮಚ ನಿಂಬೆರಸ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.

ತಾಜಾ ಹಾಗಲ ಬಳ್ಳಿಯ ಎಲೆಯ ರಸವನ್ನು ಮೂರು ಚಮಚದಷ್ಟು ತೆಗೆದುಕೊಂಡು ಒಂದು ಲೋಟ ಮಜ್ಜಿಗೆಗೆ ಮಿಶ್ರಮಾಡಿ ಪ್ರತಿದಿನ ಒಂದು ತಿಂಗಳ ಕಾಲ ಸೇವಿಸಿದರೆ ಪೈಲ್ಸ್ ತೊಂದರೆ ನಿವಾರಣೆಯಾಗುತ್ತದೆ.

ಚರ್ಮದ ಕಾಯಿಲೆಯಿರುವವರು ಹಾಗಲಕಾಯಿ ರಸಕ್ಕೆ ನಿಂಬೆರಸ ಸೇರಿಸಿ ಮುಂಜಾವಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ಚರ್ಮದ ಕಾಯಿಲೆ ಮಾಯವಾಗುತ್ತದೆ. ಜಂತು ಹುಳಗಳ ನಿವಾರಣೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ.
ಪಿತ್ತದಿಂದ ಗಂದೆಗಳಾಗಿ ಮೈ ಕಡಿತವಿದ್ದರೆ ಹಾಗಲ ಬಳ್ಳಿಯ ಎಲೆಗಳನ್ನು ಮೊಸರಿನಲ್ಲಿ ಅರೆದು ಶರೀರಕ್ಕೆ ಲೇಪಿಸಬೇಕು. ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಪಿತ್ತದ ಗಂದೆಗಳ ನಿವಾರಣೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!