ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಷ್ಟೇ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ್ದು, ಅದರ ಬೆನ್ನಲ್ಲೇ ನಂದಿನಿಯ ಧಾರವಾಡ ಪೇಡ ಹಾಗೂ ಹಾಲಿನ ಪೇಡದ ರೇಟ್ ಕೂಡ ಹೆಚ್ಚಾಗಿದೆ.
ರಾಜ್ಯದಲ್ಲಿ ನಂದಿನಿ ಹಾಲಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್ಗಳಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ಸೇರಿಸಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ ಮಾಡಲು ಮಾಲೀಕರು ಮುಂದಾಗಿದ್ದಾರೆ. ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ 5 ರಿಂದ 10 ರೂಪಾಯಿ ಹೆಚ್ಚಳವಾಗಲಿದೆ.
ಪ್ರತಿದಿನ ನಮ್ಮ ಹೋಟೆಲ್ನಲ್ಲಿ ಮಿಲ್ಕ್ ಶೇಕ್ ಗಾಗಿ 25 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಕಾಫಿ, ಚಹಾಗೆ 100 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಆ ಹೊರೆಯನ್ನು ನಾವು ಹೊತ್ತುಕೊಳ್ಳುವುದಕ್ಕೆ ಆಗುವುದಿಲ್ಲ. ಅದರಿಂದ ನಾವು ಅದನ್ನು ಗ್ರಾಹಕರ ಮೇಲೆ ಹಾಕಲೇಬೇಕಾಗುತ್ತದೆ. 65 ರೂಪಾಯಿ ಇರುವ ಮಿಲ್ಕ್ ಶೇಕ್ ಅನ್ನು 70 ರೂಪಾಯಿ ಮಾಡುವ ಪರಿಸ್ಥಿತಿ ಬಂದಿದೆ. ಐಸ್ ಕ್ರೀಮ್ ಸದ್ಯ ನಾಲ್ಕು ಲೀಟರ್ ಗೆ 470 – 480 ರುಪಾಯಿ ಇತ್ತು. ಈಗ ಒಂದು ಲೀಟರ್ ಐಸ್ ಕ್ರೀಮ್ ಬಾಕ್ಸ್ ನ ಮೇಲೆ 10 ರಿಂದ 12 ರುಪಾಯಿ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.