ಪ್ರವಾಸಪ್ರಿಯರಿಗೆ ಕಹಿಸುದ್ದಿ: ಚಿಕ್ಕಮಗಳೂರಿನ ಈ ಎರಡು ಕಡೆ ಟ್ರೆಕ್ಕಿಂಗ್‌ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರವಾಸಪ್ರಿಯರೇ ಚಿಕ್ಕಮಗಳೂರು ಭಾಗದಲ್ಲಿ ಟ್ರೆಕ್ಕಿಂಗ್‌ ಹೋಗೋಕೆ ತಯಾರಾಗಿದ್ದೀರಾ? ಹಾಗಿದ್ರೆ ನಿಮ್ಮ ಪ್ಲಾನ್‌ ಈಗಲೇ ಡ್ರಾಪ್‌ ಮಾಡಿ.. ಇಲ್ಲಿನ ಎರಡು ಫೇಮಸ್‌ ಜಾಗಗಳಲ್ಲಿ ಟ್ರೆಕ್ಕಿಂಗ್‌ ನಿಷೇಧ ಮಾಡಲಾಗಿದೆ.

ಮೂಡಿಗೆರೆ  ತಾಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜದಲ್ಲಿ ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ಸದ್ಯ ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಗಾಳಿ ಪ್ರಾರಂಭವಾಗಿದೆ. ಈ ಸಮಯದಲ್ಲಿ ಚಾರಣಕ್ಕೆ ಹೋಗುವುದು ಅಪಾಯ. ಆದರೂ ಕೂಡ ಜನರು ಈ ಪ್ರದೇಶದಲ್ಲಿ ಚಾರಣಕ್ಕೆ ತೆರಳುತ್ತಿದ್ದು, ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ವಲಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಚಾರಣ ನಿಷೇಧಿಸಿದೆ.

ರಾಜ್ಯದ ವಿವಿಧ ಚಾರಣ ಪಥಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿ, ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸುವವರೆಗೆ ಎಲ್ಲ ಚಾರಣಪಥಗಳಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಪ್ರವೇಶ ನಿರ್ಬಂಧಿಸಿತ್ತು. ಆದರೂ ಕೂಡ ಹಲವು ಚಾರಣಪಥಗಳಲ್ಲಿ ಅನಿರ್ಬಂಧಿತವಾಗಿ ಪ್ರವಾಸಿಗರು ಓಡಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!