ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ 3ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವು ಹಿರಿಯ ನಾಯಕರಿಗೆ ಕೊಕ್ ಕೊಡಲಾಗಿದೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ
ಹಗರಿ ಬೊಮ್ಮನಹಳ್ಳಿ- ಬಿ. ರಾಮಣ್ಣ
ಗೋವಿಂದರಾಜನಗರ – ಉಮೇಶ್ ಶೆಟ್ಟಿ
ಮಹದೇವಪುರ – ಮಂಜುಳಾ ಅರವಿಂದ್ ಲಿಂಬಾವಳಿ
ಸೇಡಂ – ರಾಜಕುಮಾರ ಪಾಟೀಲ್ ಹಾಲಿ ಶಾಸಕ
ಕೊಪ್ಪಳ – ಮಂಜುಳಾ ಅಮರೇಶ್
ಹೆಬ್ಬಾಳ – ಕಟ್ಟಾ ಪುತ್ರ ಜಗದೀಶ್
ಕೃಷ್ಣ ರಾಜ – ಶ್ರೀವತ್ಸ
ರೋಣ- ಕಳಕಪ್ಪ ಬಂಡಿ ಹಾಲಿ ಶಾಸಕ
ನಾಗಠಾಣ- ಸಂಜೀವ ಐಹೊಳೆ
ಎರಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಬಾಕಿ:
ಶಿವಮೊಗ್ಗ ನಗರ ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ ಸೇರಿ ಎರಡು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಅನ್ನು ಘೋಷಣೆ ಮಾಡದೇ ಬಿಜೆಪಿ ಬಾಕಿ ಉಳಿಸಿಕೊಂಡಿದೆ.
ಇನ್ನು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರಿಗೆ ಟಿಕೆಟ್ ನೀಡದೇ ಶ್ರೀವತ್ಸ ಅವರಿಗೆ ಟಿಕೆಟ್ ಕೊಡಲಾಗಿದೆ.
ಇನ್ನು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ.