Thursday, March 23, 2023

Latest Posts

ದೆಹಲಿ ಮಹಾನಗರ ಪಾಲಿಕೆಯಲ್ಲಿ ರೋಷಾವೇಷ: ಬಿಜೆಪಿ-ಎಎಪಿ ನಡುವೆ ಘರ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸಭೆಯಲ್ಲಿ ಬಿಜೆಪಿ ನಾಯಕರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೊಸದಾಗಿ ಚುನಾಯಿತ ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಸಭೆ ಬುಧವಾರ ನಡೆದಿದ್ದು, ಎಎಪಿಯ ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆಯಾದರು.

ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ಶೆಲ್ಲಿ ಒಬೆರಾಯ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಪುನಃ ಕರೆಯಲಾಯಿತು. ಈ ವೇಳೆ ಬಿಜೆಪಿ ಮತ್ತು ಎಎಪಿ ನಾಯಕರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಸದಸ್ಯರು ನೀರಿನ ಬಾಟಲಿ, ಪೇಪರ್ ಬಾಲ್ ಎಸೆದು ತಳ್ಳಾಟ-ನೂಕಾಟ ನಡೆಸಿದ್ದಾರೆ. ಬಿಜೆಪಿ ಕಾರ್ಪೊರೇಟರ್ ಶಿಖಾ ರಾಯ್ ತಮ್ಮ ಮೈಕ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ಶೆಲ್ಲಿ ಆರೋಪಿಸಿದ್ದಾರೆ.

ʻಬಿಜೆಪಿಯ ಗೂಂಡಾಗಳು ಮೇಯರ್ ಮತ್ತು ಆಮ್ ಆದ್ಮಿ ಮಹಿಳಾ ಸದಸ್ಯರ ಮೇಲೆ ನೀರಿನ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ. ಇಡೀ ದೇಶ ಬಿಜೆಪಿ ಗೂಂಡಾಗಳು ಮತ್ತು ದೌರ್ಜನ್ಯವನ್ನು ಕಂಡಿದೆʼ ಎಂದು ಆಮ್ ಆದ್ಮಿ ಟ್ವೀಟ್ ಮಾಡಿದೆ. ವಿಧಾನಸಭೆಯಲ್ಲಿ ಬಿಜೆಪಿ ಗೂಂಡಾಗಿರಿ ಮಾಡುತ್ತಿದ್ದು, ಶೀಘ್ರದಲ್ಲೇ ಬಿಜೆಪಿ ಮಾಡಿರುವ ಭ್ರಷ್ಟಾಚಾರ ಬಯಲಾಗಲಿದೆ ಅದನ್ನು ಬಹಿರಂಗಪಡಿಸುತ್ತೇವೆ ಎಂದು ಎಎಪಿ ನಾಯಕರು ಹೇಳಿದ್ದಾರೆ. ಬುಧವಾರ ನಡೆದ ಮೇಯರ್ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ವಿರುದ್ಧ 34 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರಿಂದ ಎರಡು ತಿಂಗಳಿನಿಂದ ನಡೆಯುತ್ತಿದ್ದ ಮೇಯರ್ ಚುನಾವಣೆ ಬಿಕ್ಕಟ್ಟು ಅಂತ್ಯಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!